×
Ad

ಬಾಲಯೇಸುವಿನ ವಾರ್ಷಿಕ ಮಹೋತ್ಸದ ಪ್ರಯುಕ್ತ ನವದಿನಗಳ (ನವೇನ) ಆರಂಭ

Update: 2022-01-04 20:37 IST

ಮಂಗಳೂರು : ಬಾಲಯೇಸುವಿನ ವಾರ್ಷಿಕ ಮಹೋತ್ಸವಕ್ಕೆಪೂರ್ವ ತಯಾರಿಯಾಗಿ ಜನವರಿ 4 ರಂದು ಸಂಜೆ 5 ಗಂಟೆಗೆ ದಿವ್ಯ ಬಲಿಪೂಜೆ ಹಾಗೂ 5.30 ಘಂಟೆಗೆ ಧ್ವಜರೋಹಣಗೈದು ಚಾಲನೆ ನೀಡಲಾಗುವುದು.

ನವದಿನಗಳ ನೊವೇನಾ ಪ್ರಾರ್ಥನೆ ಈ ಮೂರು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ - ನೊವೇನಾ ಪ್ರಾರ್ಥನೆ ಜನವರಿ 5 ರಿಂದ ಜನವರಿ 13ರವರೆಗೆ ನಡೆಯುವುದು. ಈದಿನಗಳಲ್ಲಿ ಪ್ರತಿದಿನ 9 ಬಲಿಪೂಜೆಗಳು ನಡೆಯುವುದು. ಬೆಳಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1 ಘಂಟೆಗೆ ಕೊಂಕಣಿ ಭಾಷೆಯಲ್ಲಿ ಸಂಜೆ 4 ಘಂಟೆಗೆ ಮಲಯಾಳಂ, 5 ಘಂಟೆಗೆ ಇಂಗ್ಲಿಷ್ ಹಾಗೂ 7.30ಕ್ಕೆ ಕನ್ನಡದಲ್ಲಿ ಬಲಿಪೂಜೆಯು ಪುಣ್ಯಕ್ಷೇತ್ರದೊಳಗೆ ನಡೆಯುವುದು. ಈ ನವದಿನಗಳ ಪ್ರಮುಖ ಬಲಿಪೂಜೆಯು ಸಂಜೆಯ 6ಕ್ಕೆ ದೇವಾಲಯದ ಆವರಣದಲ್ಲಿ ಅರ್ಪಿಸಲಾಗುವುದು.

ಬಾಲಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ - ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜ. 14, 15 ಹಾಗೂ 16ರಂದುಸರಳ ರೀತಿಯಿಂದ ಆಚರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News