×
Ad

ಆಸ್ರಣ್ಣ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಗೌರವ ಸನ್ಮಾನ

Update: 2022-01-04 21:14 IST

ಮಂಗಳೂರು, ಜ.4: ಮಂಗಳೂರಿನ ಯಕ್ಷ ಪ್ರತಿಭೆ (ರಿ) ಸಂಸ್ಥೆ ವತಿಯಿಂದ ಕಟೀಲು ಗೋಪಾಕೃಷ್ಣ ಆಸ್ರಣ್ಣ ಸಂಸ್ಮರಣೆ, ಅಭಿನಂದನೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಗರದ ಮಂಗಳಾದೇವಿ ದೇವಸ್ಥಾನದ ಮಂಗಳ ಮಂಟಪದಲ್ಲಿ ನಡೆಯಿತು.

ಬಲಿಪ ಪ್ರಸಾದ ಭಟ್ ಅವರಿಗೆ ಆಸ್ರಣ್ಣ ಪ್ರಶಸ್ತಿ, ಮೇಯರ್ ಪ್ರೇಮಾನಂದ ಶೆಟ್ಟಿ ಅವರಿಗೆ ಗೌರವ ಅಭಿನಂದನೆ, ವೇದಮೂರ್ತಿ ಕದ್ರಿ ಶ್ರೀಕೃಷ್ಣ ಅಡಿಗರಿಗೆ ಗೌರವ ಸನ್ಮಾನ, ಹಾಸ್ಯಗಾರ ವಿಜಯ ಕುಮಾರ್ ಶೆಟ್ಟಿ ಮೈಲೊಟ್ಟು ಅವರಿಗೆ ಯಕ್ಷ ಸಂಮಾನ, ಧನ್ವಿತ್ ಸುವರ್ಣ ಕಟಿಲು ಅವರಿಗೆ ಬಾಲಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಟೀಲು ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.

ರವಿ ಅಲೆವೂರಾಯ ವರ್ಕಾಡಿ ಸಂಸ್ಮರಣೆ ಮತ್ತು ಅಭಿನಂದನಾ ಭಾಷಣ ಮಾಡಿದರು. ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದರೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅದಾನಿ ಗ್ರೂಪ್ಸ್‌ನ ಕಿಶೋರ್ ಅಳ್ವ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಆಡಳಿತ ಮೊಕ್ತೇಸರ ರಮಾನಾಥ ಪಿ.ಹೆಗ್ಡೆ, ಕಾರ್ಪೊರೇಟರ್ ಭಾನುಮತಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಶ್ರೀಪತಿ ಭಟ್ ಮೂಡುಬಿದರೆ, ಅಗರಿ ರಾಘವೇಂದ್ರ ರಾವ್, ಪ್ರಭಾಕರ ಸುವರ್ಣ ದುಬೈ, ಯುಗಪುರುಷದ ಭುವನಾಭಿರಾಮ ಉಡುಪ, ರವಿ ರೈ ಫಜೀರು ಉಪಸ್ಥಿತರಿದ್ದರು.

ಯಕ್ಷಪ್ರತಿಭೆ ಸಂಚಾಲಕ ಸಂಜಯ ಕುಮಾರ್ ಗೋಣಿಬೀಡು ಸ್ವಾಗತಿಸಿದರು. ತುಳು ಅಕಾಡಮಿಯ ಸದಸ್ಯೆ ಮಲ್ಲಿಕಾ ಅದಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News