ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2022-01-04 15:55 GMT

ಮಲ್ಪೆ, ಜ.4: ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರರೊಬ್ಬರು ಮೃತ ದೇಹವು ಜ.2ರಂದು ರಾತ್ರಿ 10ಗಂಟೆ ಸುಮಾರಿಗೆ ಪತ್ತೆಯಾಗಿದೆ.

ಮೃತರನ್ನು ಸಾಸ್ತಾನ ಕೋಡಿಯ ಚಂದ್ರ ಮರಕಾಲ (51) ಎಂದು ಗುರುತಿಸಲಾಗಿದೆ. ಇವರು ಇತರ ಮೀನುಗಾರರೊಂದಿಗೆ ಬೋಟಿನಲ್ಲಿ ಮಲ್ಪೆ ಬಂದರಿ ನಿಂದ ಡಿ.31ರಂದು ಮೀನುಗಾರಿಕೆಗೆ ಹೊರಟಿದ್ದು, ಜ.1ರಂದು ಮಧ್ಯರಾತ್ರಿ ಬಲೆ ಎಳೆಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಬೋಟಿನಿಂದ ನೀರಿಗೆ ಬಿದ್ದು ಸಮುದ್ರ ಪಾಲಾಗಿದ್ದರು.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News