×
Ad

ಐಸಿಸ್ ಸಂಪರ್ಕ ಶಂಕೆ; ಬಂಧಿಸಲ್ಪಟ್ಟ ಉಳ್ಳಾಲದ ಮಹಿಳೆಯನ್ನು ಹೊಸದಿಲ್ಲಿಗೆ ಕರೆದೊಯ್ದ ಎನ್‌ಐಎ ತಂಡ

Update: 2022-01-04 21:52 IST

ಮಂಗಳೂರು, ಜ.4: ಐಸಿಸ್ ಸಂಘಟನೆಯ ಜೊತೆ ನಂಟು ಬೆಳೆಸಿರುವ ಶಂಕೆಯ ಮೇರೆಗೆ ಉಳ್ಳಾಲದ ದೀಪ್ತಿ ಮಾರ್ಲ ಯಾನೆ ಮರಿಯಂ ಎಂಬಾಕೆಯನ್ನು ಸೋಮವಾರ ಬಂಧಿಸಿದ್ದ ಎನ್‌ಐಎ ತಂಡವು ಹೆಚ್ಚಿನ ವಿಚಾರಣೆಗಾಗಿ ಮಂಗಳವಾರ ನಗರದಿಂದ ದೆಹಲಿಗೆ ಕರೆದೊಯ್ದಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ದೀಪ್ತಿ ಮಾರ್ಲ ಯಾನೆ ಮರಿಯಂ ಬಳಸುತ್ತಿದ್ದ ಮೊಬೈಲ್ ಫೋನನ್ನು ಎನ್‌ಐಎ ತಂಡವು ವಶಕ್ಕೆ ಪಡೆದಿದೆ. ಅಲ್ಲದೆ ಆಕೆ ಬಳಸುತ್ತಿದ್ದ ಲ್ಯಾಪ್‌ಟಾಪ್‌ನ್ನು ಎನ್‌ಐಎ ತಂಡವು ಈ ಹಿಂದೆಯೇ ವಶಪಡಿಸಿಕೊಂಡು ಹೋಗಿತ್ತು ಎಂದು ತಿಳಿದುಬಂದಿದೆ.

ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮನೆಗೆ ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದ ಎನ್‌ಐಎ ತಂಡವು ದೀಪ್ತಿ ಮಾರ್ಲ ಯಾನೆ ಮರಿಯಂಳನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News