ದಾಖಲೆಗಳಿದ್ದ ಪರ್ಸ್ ಪೊಲೀಸ್ ಆಯುಕ್ತರಿಗೆ ಒಪ್ಪಿಸಿದ ಅಧಿಕಾರಿಗಳು
Update: 2022-01-04 21:59 IST
ಮಂಗಳೂರು, ಜ.4: ನಗರದ ಕುಂಟಿಕಾನ ಸಮೀಪದ ಎ.ಜೆ. ಆಸ್ಪತ್ರೆಯ ಬಳಿ ಸಿಕ್ಕಿದ ಪರ್ಸೊಂದನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಟೌನ್ ಪ್ಲಾನಿಂಗ್ ಅಧಿಕಾರಿಯಾಗಿರುವ ಇಬ್ಬರು ಯುವಕರು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ರಿಗೆ ಮಂಗಳವಾರ ಒಪ್ಪಿಸಿದ್ದಾರೆ.
ನಗರ ಯೋಜಕರಾಗಿರುವ ಉಬೈದುಲ್ಲಾ ಹಾಗೂ ಶರೀಖ್ ಮುಹಮ್ಮದ್ ಬಡ್ಡೂರು ಇವರಿಗೆ ಸೋಮವಾರ ಈ ಪರ್ಸ್ ಸಿಕ್ಕಿತ್ತು. ಸೌಮ್ಯ ಪುತ್ತೂರು ಎಂಬವರಿಗೆ ಸೇರಿದ ಈ ಪರ್ಸ್‌ನಲ್ಲಿ ಹಣ, ಮತದಾರರ ಗುರುತಿನ ಚೀಟಿ ಸಹಿತ ಅಮೂಲ್ಯ ದಾಖಲೆ ಪತ್ರಗಳಿತ್ತು. ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ.ಕೃಷ್ಣ ಉಪಸ್ಥಿತಿಯಲ್ಲಿ ಆಯುಕ್ತರಿಗೆ ಹಸ್ತಾಂತರಿಸಲಾಗಿದೆ.
ದಾಖಲೆ ಪತ್ರ ಕಳೆದುಕೊಂಡ ಸೌಮ್ಯ ಅವರು ಪೊಲೀಸ್ ಆಯುಕ್ತಾಲಯ ಕಚೇರಿಯನ್ನು ಸಂಪರ್ಕಿಸಲು ಕಮಿಷನರ್ ಮನವಿ ಮಾಡಿದ್ದಾರೆ.