×
Ad

ಶಿರ್ವ: ಚಿತ್ರನಟಿ ಶುಭಾ ಪೂಂಜಾ- ಸುಮಂತ್ ಮಹಾಬಲ ವಿವಾಹ

Update: 2022-01-05 16:58 IST

ಉಡುಪಿ, ಜ. 5: ಬಿಗ್‌ ಬಾಸ್ ಹಾಗೂ ಮೊಗ್ಗಿನ ಮನಸ್ಸು ಖ್ಯಾತಿಯ ಚಿತ್ರ ನಟಿ ಶುಭಾ ಪೂಂಜಾ ಕುಂದಾಪುರ ಮೂಲದ ಸುಮಂತ್ ಮಹಾಬಲ ಜೊತೆ ಶಿರ್ವ ಸಮೀಪದ ಮಜಲಬೆಟ್ಟು ಬೀಡುವಿನ ನಿವಾಸದಲ್ಲಿ ಬುಧವಾರ ಹಸೆಮಣೆ ಏರಿದ್ದಾರೆ.

ಈ ವಿಚಾರವನ್ನು ಶುಭಾ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು ಹಿರಿಯರ, ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆ ಗಳು ನಮ್ಮ ಮೇಲಿರಲಿ’ ಎಂದು ಹೇಳಿಕೊಂಡಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಇವರು ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News