ಉತ್ತರ ಪ್ರದೇಶ: ಪ್ರಮುಖ ರ‍್ಯಾಲಿಗಳನ್ನು ಮುಂದೂಡಿದ ಕಾಂಗ್ರೆಸ್; ಆದಿತ್ಯನಾಥ್ ನಾಳಿನ ಕಾರ್ಯಕ್ರಮ ರದ್ದು

Update: 2022-01-05 12:02 GMT

ಲಕ್ನೋ: ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಪ್ರದೇಶ ಸಹಿತ ಎಲ್ಲಾ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿನ ತನ್ನ ಪ್ರಮುಖ ರಾಜಕೀಯ ರ‍್ಯಾಲಿಗಳನ್ನು ಕಾಂಗ್ರೆಸ್ ಮುಂದೂಡಿದೆ.

"ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ರ‍್ಯಾಲಿಗಳನ್ನು ಆಯೋಜಿಸುವ ಕುರಿತು ನಿರ್ಧರಿಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಲಾಗಿದೆ" ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.

ಇನ್ನೊಂದೆಡೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಗೌತಮ್ ಬುದ್ಧ್ ನಗರ್ ಜಿಲ್ಲೆಯಲ್ಲಿ ಗುರುವಾರ ನಡೆಸಲಿದ್ದ ಸರಕಾರಿ ಕಾರ್ಯಕ್ರಮವೊಂದನ್ನು ರದ್ದುಗೊಳಿಸಿದ್ದಾರೆ. ಇದಕ್ಕೆ ಅಧಿಕೃತ ಕಾರಣ ನೀಡಲಾಗಿಲ್ಲದೇ ಇದ್ದರೂ  ಕಳೆದ ವಾರ ಈ ಜಿಲ್ಲೆ ರಾಜ್ಯದಲ್ಲಿಯೇ ಗರಿಷ್ಠ ಕೋವಿಡ್ ಪ್ರಕರಣಗಳನ್ನು ದಾಖಲಿಸಿತ್ತು ಎಂಬುದನ್ನು ಉಲ್ಲೇಖಿಸಬಹುದಾಗಿದೆ.

  • ಮಂಗಳವಾರ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕಾಂಗ್ರೆಸ್  ಆಯೋಜಿಸಿದ್ದ 'ಲಡ್ಕೀ ಹೂಂ, ಲಡ್ ಸಕ್ತೀ ಹೂಂ' ಮ್ಯಾರಥಾನ್ ಸಂದರ್ಭ ಹಲವಾರು ಮಂದಿ ಯುವತಿಯರು ಮಾಸ್ಕ್ ಕೂಡ ಧರಿಸದೆ  ಭಾಗವಹಿಸಿದ್ದು ಹಾಗೂ ಕೆಲವರು ಈ ಸಂದರ್ಭ ತಳ್ಳಾಟದ ವೇಳೆ ರಸ್ತೆಯಲ್ಲಿ ಬಿದ್ದ ಘಟನೆ ಎಲ್ಲಿ ಕಾಲ್ತುಳಿತಗಳಿಗೆ ಕಾರಣವಾಗಬಹುದೋ ಎಂಬ ಭಯ ಹುಟ್ಟಿಸಿದ ನಂತರದ ಬೆಳವಣಿಗೆಯಲ್ಲಿ ಇಂದು ಕಾಂಗ್ರೆಸ್ ತನ್ನ ಪ್ರಮುಖ ರ‍್ಯಾಲಿಗಳನ್ನು ಮುಂದೂಡುವ ನಿರ್ಧಾರ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News