"ನಾನು ವಿಮಾನ ನಿಲ್ದಾಣದವರೆಗೆ ಜೀವಂತವಾಗಿ ವಾಪಸಾಗಿರುವುದಕ್ಕೆ ಸಿಎಂಗೆ ಥ್ಯಾಂಕ್ಸ್ ಹೇಳಿ" ಎಂದ ಪ್ರಧಾನಿ ಮೋದಿ: ವರದಿ

Update: 2022-01-05 12:15 GMT

ಹೊಸದಿಲ್ಲಿ: ಇಂದು ಪಂಜಾಬ್‍ನ ಹುಸೈನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲಿದ್ದ ಹಾಗೂ ಫಿರೋಝಪುರ್‍ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ವಾಹನ ಮತ್ತು ಬೆಂಗಾವಲು ಪಡೆ ರೈತರ ಪ್ರತಿಭಟನೆಯೊಂದರ ಕಾರಣ ಫ್ಲೈಓವರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಸಿಲುಕಿಕೊಂಡ ಕಾರಣ ಭದ್ರತಾ ಲೋಪ ಉಂಟಾಗಿತ್ತು.

ಈ ವೇಳೆ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಟಿಂಡಾದಲ್ಲಿನ ವಾಯು ನೆಲೆಯ ವಿಮಾನ ನಿಲ್ದಾಣಕ್ಕೆ ಮರಳಿದ ಪ್ರಧಾನಿ ಅಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ, "ಅಪ್ನೆ ಸೀಎಂ ಕೋ ಥ್ಯಾಂಕ್ಸ್ ಕೆಹ್ನಾ, ಕಿ ಮೈ ಭಟಿಂಡಾ ಏರ್‌ಪೋರ್ಟ್ ತಕ್ ಝಿಂದಾ ಲೌಟ್ ಪಾಯಾ"( ನಾನು ಭಟಿಂಡಾ ವಿಮಾನ ನಿಲ್ದಾಣದ ತನಕ ಜೀವಂತ ಮರಳಲು ಸಾಧ್ಯವಾಗಿದ್ದಕ್ಕೆ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸಿ) ಎಂದು ಹೇಳಿದರೆಂದು ANI ವರದಿ ಮಾಡಿದೆ.

ಇಂದು ನಡೆದ ಈ ಬೆಳವಣಿಗೆ ಸಾಕಷ್ಟು ಚರ್ಚೆಗೀಡಾಗಿದೆ. ಈಗಾಗಲೇ ಕೇಂದ್ರ ಗೃಹ ಸಚಿವಾಲಯ ಈ ಘಟನೆಯನ್ನು ಗಂಭೀರ ʼಭದ್ರತಾ ಲೋಪ' ಎಂದು ಪರಿಗಣಿಸಿದೆಯಲ್ಲದೆ ಪಂಜಾಬ್ ಸರಕಾರದಿಂದ ವರದಿಯನ್ನೂ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News