ಉಡುಪಿ ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ ಶೇ.45ರಷ್ಟು ಮಕ್ಕಳಿಗೆ ಲಸಿಕೆ ನೀಡಿಕೆ ಪೂರ್ಣ: ಆರೋಗ್ಯ ಇಲಾಖೆ
ಉಡುಪಿ, ಜ.5: ಉಡುಪಿ ಜಿಲ್ಲೆಯಲ್ಲಿ ಇಂದು ಸಂಜೆಯವರೆಗೆ 15ರಿಂದ 18 ವರ್ಷದೊಳಗಿನ 24283 ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡುವ ಮೂಲಕ ಮೂರು ದಿನಗಳಲ್ಲಿ ಶೇ.45ರಷ್ಟು ಮಕ್ಕಳಿಗೆ ಮೊದಲ ಡೋಸ್‌ನ್ನು ನೀಡಿದಂತಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ 53,55 ಮಂದಿ 15ರಿಂದ 18ವರ್ಷದೊಳಗಿನ ಮಕ್ಕಳಿಗೆ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾ ಗಿದೆ. ದಿನದಲ್ಲಿ ಸಂಜೆಯವರೆಗೆ 3347 ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ. ಈ ಮೂಲಕ ಒಟ್ಟಾರೆಯಾಗಿ 24,283 ಮಂದಿ ವಿದ್ಯಾರ್ಥಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಚಾಮರಾಜನಗರ, ಉತ್ತರಕನ್ನಡ, ಬಾಗಲಕೋಟೆ, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಶೇ.40ಕ್ಕಿಂತ ಅಧಿಕ ಮಕ್ಕಳಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.
6231 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಬುಧವಾರ ಸಂಜೆ 4:30ರವರೆಗೆ ಎಲ್ಲಾ ವರ್ಗಗಳ ಒಟ್ಟು 6,231 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 3347 ಮಂದಿ ವಿದ್ಯಾರ್ಥಿಗಳು ಒಟ್ಟು 4,493 ಮಂದಿ ಮೊದಲ ಡೋಸ್ ಹಾಗೂ 1738 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 21037 ಮಂದಿ ಮೊದಲ ಡೋಸ್ ಹಾಗೂ 1184 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 109 ಮಂದಿ ಮೊದಲ ಡೋಸ್ ಹಾಗೂ 548 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 6 ಮಂದಿ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರೂ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 21037 ಮಂದಿ ಮೊದಲ ಡೋಸ್ ಹಾಗೂ 1184 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 109 ಮಂದಿ ಮೊದಲ ಡೋಸ್ ಹಾಗೂ 548 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಒಟ್ಟು 6 ಮಂದಿ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರೂ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
ಶೇ.3.33ಕ್ಕೇರಿದ ಪಾಸಿಟಿವಿಟಿ ಪ್ರಮಾಣ
ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.3.33ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಸುಧಾಕರ ಟ್ವಿಟ್‌ನಲ್ಲಿ ತಿಳಿಸಿದ್ದಾರೆ. ದಿನದಲ್ಲಿ ಒಟ್ಟು 4246 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದು, ಇದರಿಂದ ನಿನ್ನೆ ಶೇ.2.59 ಇದ್ದ ಪಾಸಿಟಿವಿಟಿ ಪ್ರಮಾಣ ಇಂದು ಶೇ.3.33ಕ್ಕೆ ನೆಗೆದಿದೆ. ಬೆಂಗಳೂರು ನಗರದಲ್ಲಿ ಈ ಪ್ರಮಾಣ ಶೇ.6.45ಕ್ಕೇರಿದೆ ಎಂದವರು ಹೇಳಿದ್ದಾರೆ.
ಇಂದು ರಾಜ್ಯದಲ್ಲಿ ಬಂದ ಪಾಸಿಟಿವ್‌ನಲ್ಲಿ ಶೇ.85ರಷ್ಟು (3,605) ಬೆಂಗಳೂರು ನಗರದ್ದಾಗಿದೆ.ನಿನ್ನೆ ಹೊಸದಾಗಿ 149 ಮಂದಿಯಲ್ಲಿ ಒಮೈಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಪತ್ತೆಯಾದ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 226ಕ್ಕೇರಿದೆ ಎಂದೂ ಡಾ.ಸುಧಾಕರ ತಿಳಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಎರಡು ದಿನಗಳಲ್ಲೇ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ ಎಂದೂ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.