×
Ad

ನಡೂರು ಶ್ರೀವಾಣಿ ಪ್ರೌಢಶಾಲೆಯ 78 ವಿದ್ಯಾರ್ಥಿಗಳಿಗೆ ಲಸಿಕೆ

Update: 2022-01-05 19:48 IST

ಬ್ರಹ್ಮಾವರ, ಜ.5: ನಡೂರು ಶ್ರೀವಾಣಿ ಪ್ರೌಢಶಾಲೆಯ 15ರಿಂದ 18ವರ್ಷ ವಯಸ್ಸಿನ ಅರ್ಹ 78 ವಿದ್ಯಾರ್ಥಿಗಳು ಬುಧವಾರ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.

ಲಸಿಕಾ ವಿತರಣಾ ಕಾರ್ಯಕ್ರಮವನ್ನು ಕಾಡೂರು ಗ್ರಾಪಂ ಅಧ್ಯಕ್ಷ ಪಾಂಡು ರಂಗ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಉಪಾಧ್ಯಕ್ಷೆ ಅಮಿತಾ ರಾಜೇಶ್, ಮಂದರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ವಿಶ್ವನಾಥ್ ಶೆಟ್ಟಿ ಸ್ವಾಗತಿಸಿದರು. ಕೇಂದ್ರದ ಫಾಮರ್ಸಿ ಅಧಿಕಾರಿ ಉಮೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿ ದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News