ಉಡುಪಿ: ಜ.6ರಂದು ಶೂ ಪಾಲಿಶ್, ಟೀ ಮಾರಾಟ ಮಾಡುವ ಮೂಲಕ ಅತಿಥಿ ಉಪನ್ಯಾಸಕರಿಂದ ವಿನೂತನ ಪ್ರತಿಭಟನೆ
Update: 2022-01-05 19:53 IST
ಉಡುಪಿ, ಜ.5: ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಹಿತರಕ್ಷಣಾ ಸಮಿತಿ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಜ.6ರಂದು ಬೆಳಗ್ಗೆ 11ಗಂಟೆಯಿಂದ ಅಜ್ಜರಕಾಡು ಹುತಾತ್ಮ ಎದುರು ಸಚಿವರ ಮುಖವಾಡ ಧರಿಸಿ, ಶೂ ಪಾಲಿಶ್, ಟೀ ಮಾರಾಟ ಮಾಡುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.