’ಎಸ್2ಎಸ್2ಎಸ್’ ಬುಲೆಟಿನ್ ಬಿಡುಗಡೆ
Update: 2022-01-05 19:59 IST
ಉಡುಪಿ, ಜ.5: ಉಡುಪಿ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ’ಎಸ್2ಎಸ್2ಎಸ್’ ಬುಲೆಟಿನ್ನ್ನು ಮೇಲಕ ಮಣಿಪಾಲ ಮೆಡಿಕಲ್ ಕಾಲೇಜಿನ ಡೀನ್ ಡಾ.ಉಲ್ಲಾಸ್ ಕಾಮತ್ ಬಿಡುಗಡೆಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ ಅಧ್ಯಕ್ಷತೆ ವಹಿಸಿ ದ್ದರು. ವಿಭಾಗ ಮುಖ್ಯಸ್ಥೆ ಪ್ರೊ.ಉಷಾರಾಣಿ ಎಸ್.ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಉಪನ್ಯಾಸಕ ಅಭಿಲಾಷ್, ಐಕ್ಯೂಎಸಿ ಸಂಯೋಜಕ ಪ್ರೊ.ಅರುಣ್ ಕುಮಾರ್ ಬಿ., ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾರ್ಗವಿ ಭಟ್ ಕಾರ್ಯಕ್ರಮ ನಿರೂಪಿಸಿದರು.