ತುಳು ಅಕಾಡಮಿ ಕಚೇರಿಗೆ ಸಚಿವ ಸುನೀಲ್ ಕುಮಾರ್ ಭೇಟಿ
Update: 2022-01-05 20:17 IST
ಮಂಗಳೂರು, ಜ.5: ನಗರದ ತುಳುಭವನದಲ್ಲಿರುವ ತುಳು ಸಾಹಿತ್ಯ ಅಕಾಡಮಿಯ ಕಚೇರಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಇಲಾಖೆಯ ಸಚಿವ ಸುನೀಲ್‌ಕುಮಾರ್ ಬುಧವಾರ ಭೇಟಿ ನೀಡಿ ಅಪೂರ್ಣ ಕಾಮಗಾರಿಯನ್ನು ಪರಿಶೀಲಿಸಿದರು.
ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ತುಳು ಭವನ ಸಂಪೂರ್ಣಗೊಳ್ಳಲು ಮಂಜೂರಾಗಿರುವ 3.6 ಕೋ.ರೂ. ಸಹಿತ ಹೆಚ್ಚುವರಿಯಾಗಿ 2 ಕೋ.ರೂ.ಬಿಡುಗಡೆಗೊಳಿಸುವಂತೆ ಹಾಗೂ ತುಳು ಶಿಕ್ಷಕರಿಗೆ ಗೌರವ ಧನ ಪಾವತಿಗೆ ಇರುವ ತೊಡಕು ನಿವಾರಿಸಲು ಮನವಿ ಸಲ್ಲಿಸಿದರು.