ವಿಶ್ವ ಟೆಸ್ಟ್‌ ಚಾಂಪಿಯನ್‌ ನ್ಯೂಝಿಲ್ಯಾಂಡ್‌ ಅನ್ನು ಐತಿಹಾಸಿಕವಾಗಿ ಮಣಿಸಿದ ಬಾಂಗ್ಲಾದೇಶ ತಂಡ

Update: 2022-01-05 15:37 GMT
Photo: Twitter/Abulhasanat

ಬೇ ಓವಲ್: ಮೌಂಟ್ ಮೌಂಗನುಯಿ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿಶ್ವ ಚಾಂಪಿಯನ್ ನ್ಯೂಝಿಲ್ಯಾಂಡ್‌ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
  
ಕಿವೀಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 328 ರನ್ ಪೇರಿಸಿದ್ದರೆ, ಬಾಂಗ್ಲಾದೇಶ 458 ರನ್ ಬಾರಿಸಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಝಿಲ್ಯಾಂಡ್‌ 169 ದಾಖಲಿಸಿತ್ತು. ಅತಿಥೇಯರನ್ನು ಅನ್ನು ಮಣಿಸಲು ಬಾಂಗ್ಲಾದೇಶಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 40 ರನ್‌ಗಳ ಅವಶ್ಯಕತೆ ಇತ್ತು. ಈ ಮೊತ್ತವನ್ನು ಸುಲಭವಾಗಿ ಪೇರಿಸಿದ ಬಾಂಗ್ಲಾ ನ್ಯೂಝಿಲ್ಯಾಂಡ್‌ ಅನ್ನು ಮಣಿಸಿ ಐತಿಹಾಸಿಕ ಗೆಲುವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. 

ಈ ವಿಜಯದೊಂದಿಗೆ ಬಾಂಗ್ಲಾದೇಶ ತನ್ನ ರ್ಯಾಂಕಿಂಗ್ ಅನ್ನು 9 ನೇ ಸ್ಥಾನಕ್ಕೆ ತಂದುಕೊಂಡರೆ, ಹಾಲಿ ವರ್ಲ್ಡ್ ಚಾಂಪಿಯನ್ ಆಗಿದ್ದ ನ್ಯೂಝಿಲ್ಯಾಂಡ್‌ ಎರಡನೇ ಸ್ಥಾನಕ್ಕೆ ಕುಸಿದಿದೆ. 

ಕಳೆದ 4 ವರ್ಷಗಳಲ್ಲಿ ತನ್ನ ನೆಲದಲ್ಲಿ ನಡೆದ 16 ಟೆಸ್ಟ್ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಕಿವೀಸ್ ಸೋತರೆ, ನ್ಯೂಝಿಲ್ಯಾಂಡ್‌ ಎದುರು ಆಡಿದ ಎಲ್ಲಾ ಮಾದರಿಯ 32 ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾ ಜಯ ಸಾಧಿಸಿ ಇತಿಹಾಸ ಬರೆದಿದೆ.  

 ಇತ್ತೀಚಿನ ಪಂದ್ಯಗಳಲ್ಲಿ ತನ್ನ ಸತತ ಕಳಪೆ ಪ್ರದರ್ಶನದ ಹೊರತಾಗಿಯೂ ನ್ಯೂಝಿಲ್ಯಾಂಡ್ ವಿರುದ್ಧ ಬಾಂಗ್ಲಾದೇಶ ಉತ್ತಮ ಪ್ರದರ್ಶನ ನೀಡಿತ್ತು. ಡೇವನ್ ಕಾನ್‌ವೇ ಹಾಗೂ ವಿಲ್ ಯಂಗ್ ಅವರ ಜೊತೆಯಾಟದಲ್ಲಿ 138 ರನ್ ಪೇರಿಸಿದಾಗ್ಯೂ ಬಾಂಗ್ಲಾದೇಶ ಪಂದ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಅಮೋಘ ಪ್ರದರ್ಶನ ನೀಡಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ 328 ರನ್‌ಗಳೊಂದಿಗೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಿದ ಬಾಂಗ್ಲಾ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 130 ರನ್ ಗಳ ಭರ್ಜರಿ ಮುನ್ನಡೆಯೊಂದಿಗೆ 478 ರನ್ ದಾಖಲಿಸಿತ್ತು.  88 ರನ್‌ ಬಾರಿಸಿದ  ಮೊಮಿನುಲ್ ಹಕ್ ಬಾಂಗ್ಲಾ ತಂಡಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ.‌ ಇಬಾದತ್‌ ಹುಸೈನ್‌ ಬೌಲಿಂಗ್‌ ನಲ್ಲಿ ಉತ್ತಮ ಪ್ರದರ್ಶನ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News