ವಾಹನಗಳ ಬ್ಯಾಟರಿ ಕಳವು

Update: 2022-01-05 16:29 GMT

ಶಿರ್ವ, ಜ.5: ಎರಡು ವಾಹನಗಳ ಬ್ಯಾಟರಿ ಕಳವು ಮಾಡಿರುವ ಘಟನೆ ಜ.4ರಂದು ಮುಂಜಾನೆ ಶಿರ್ವ ಜಾರಂದಾಯ ದೈವಸ್ಥಾನ ರೋಡ್ ಎಂಬಲ್ಲಿ ನಡೆದಿದೆ.

ರಾಜೇಶ್ ಆರ್.ಪ್ರಭು ಎಂಬವರ ಮನೆಯ ಬಳಿ ತೆರೆದ ಕಾರು ಶೆಡ್‌ನಲ್ಲಿ ಇರಿಸಿದ್ದ ಎರಡು ಟಾಟಾ ಏಸ್ ವಾಹನದ ಎರಡು ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಮೌಲ್ಯ 9,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News