×
Ad

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಅವಶ್ಯ : ರವೀಂದ್ರ ನಾಯ್ಕ

Update: 2022-01-06 20:31 IST

ಶಿರಸಿ: ರಾಜ್ಯಾದ್ಯಂತ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ತರಗತಿ ಬಹಿಷ್ಕರಿಸಿ 25 ದಿನಗಳಿಂದ ಧರಣಿ ನಡೆಸುತ್ತಿದ್ದರೂ, ಸರಕಾರ ಸ್ಪಂಧಿಸದೇ ಇರುವುದು ಖಂಡನಾರ್ಹ. ವಿದ್ಯಾರ್ಥಿಗಳ ಶೈಕ್ಷಣಿಕ ಮುಂದಿನ ಭವಿಷ್ಯದ ಹಿತದಿಂದ ರಾಜ್ಯಪಾಲರು ಮಧ್ಯಪ್ರವೆಶಿಸಿ, ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಾಮಾಜಿಕ ಹೋರಾಟಗಾರರಾದ ರವೀಂದ್ರ ನಾಯ್ಕ ರಾಜ್ಯಪಾಲರಿಗೆ ಕೋರಿದ್ದಾರೆ.

ಕಳೆದ ಡಿಸೆಂಬರ್ ಹತ್ತರಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನ್ಯಾಯಯುತ ಸಮಸ್ಯೆಗಳಿಗೆ  ಸರಕಾರ ಸ್ಫಂದಿಸದೇ ಇರುವುದು ವಿಷಾದಕರ. ನೆಟ್ ಮತ್ತು ಸ್ಲೆಟ್ ಮುಗಿಸಿದವರಿಗೆ ಅನುಕ್ರಮವಾಗಿ 11 ಸಾವಿರ ಹಾಗೂ ಪಿಹೆಚ್‌ಡಿ ಮಾಡಿದವರಿಗೆ 13 ಸಾವಿರ ವೇತನ ನೀಡುತ್ತಿರುವುದು ಅವೈಜ್ಞಾನಿಕ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನ ವ್ಯಕ್ತಪಡಿಸುತ್ತೇನೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News