ಕಲರ್ಸ್ ಕನ್ನಡದ 'ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ'ಗೆ ಮಾಸ್ಟರ್ ತೌಶೀರ್ ಉಜಿರೆ ಆಯ್ಕೆ

Update: 2022-01-06 15:22 GMT

ಬೆಳ್ತಂಗಡಿ: ಕಲರ್ಸ್ ಕನ್ನಡ ಚಾನೆಲ್ ಹಮ್ಮಿಕೊಂಡಿರುವ 'ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ' ಗೆ ಉಜಿರೆಯ ತೌಶೀರ್  ಆಯ್ಕೆಯಾಗಿದ್ದಾರೆ.

ಜ. 8-9ರಂದು ರಾತ್ರಿ  9 ಗಂಟೆಯಿಂದ ನಡೆಯುವ ರಿಯಾಲಿಟಿ ಶೋದಲ್ಲಿ ಅವರು ಭಾಗವಹಿಸಲಿದ್ದಾರೆ.

ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ರಾಜ್ಯಾದ್ಯಂತ ನಾಲ್ಕು ಹಂತಗಳಲ್ಲಿ ಹಮ್ಮಿಕೊಂಡಿದ್ದ ಡ್ಯಾನ್ಸಿಂಗ್ ಸ್ಟಾರ್‌ಗಳ ಆಯ್ಕೆ ಆಡಿಷನ್‌ನಲ್ಲಿ ಮಾಸ್ಟರ್ ತೌಶೀರ್ ಉತ್ತಮ ಪ್ರದರ್ಶನ ನೀಡಿ ಮೆಗಾ ಆಡಿಷನ್‌ನಲ್ಲಿ ಆಯ್ಕೆಯಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಅವರ ಪ್ರಮುಖ ಜೊತೆಗಾರ್ತಿಯಾಗಿ ಖ್ಯಾತ ಚಲನಚಿತ್ರ ನಟಿ, ರಾಜಾರಾಣಿ ಶೋನ ರನ್ನರ್ ಆಪ್ ಪಡೆದಿರುವ ಇಶಿತಾ ವರ್ಷ ಅವರು ಇರಲಿದ್ದಾರೆ.

ತೌಶೀರ್ ಉಜಿರೆ ಟಿ.ಬಿ ಕ್ರಾಸ್ ಬಳಿಯ ಸಿ.ಎಚ್.ಮಂಝಿಲ್ ನಿವಾಸಿ ಯು.ಕೆ ಹನೀಫ್ ಮತ್ತು ತಾಹಿರಾ ದಂಪತಿಯ ಪುತ್ರ.  ಗುರುವಾಯನಕೆರೆ ಎಕ್ಸೆಲ್ ಪ. ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಭ್ಯಸಿಸುತ್ತಿದ್ದಾರೆ.

ಮಾಸ್ಟರ್ ತೌಶಿರ್ ಅವರು ಈ ಹಿಂದೆ ಸ್ಟಾರ್ ಸುವರ್ಣ ಚಾನೆಲ್‌ನ "ಪುಟಾಣಿ ಪಂಟ್ರು ಸೀಝನ್-2" ಇದರಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. "ಡ್ಯಾನ್ಸ್- ಡ್ಯಾನ್ಸ್" ರಿಯಾಲಿಟಿ ಶೋ ಇದರ ವಿನ್ನರ್ ಆಗಿದ್ದಾರೆ. ಇದಕ್ಕಾಗಿ ಅವರು 2016 ರಲ್ಲಿ "ಸುರ್ವಣ ಪರಿವಾರ್ ಅವಾರ್ಡ್" ಕೂಡಾ ಪಡೆದಿರುತ್ತಾರೆ. ಅಲ್ಲದೆ ಈ ಹಿಂದೆ ಅವರು ಎರಡು ಚಲನಚಿತ್ರಗಳಾದ "ಅಲ್ಲಮ" ಮತ್ತು "ರಾಜಾರಾಣಿ ರೋರಲ್ ರಾಕೆಟ್" ದಲ್ಲೂ ಬಾಲನಟನಾಗಿ ಪ್ರದರ್ಶನ ತೋರಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News