ಉಡುಪಿ: ವಾರದ ಸಂತೆ ರದ್ದು
Update: 2022-01-06 21:03 IST
ಉಡುಪಿ, ಜ.6: ಸರಕಾರದ ಸೂಚನೆಯಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್-19ರ ರೂಪಾಂತರಿ ಒಮೈಕ್ರಾನ್ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ವಾರಾಂತ್ಯ ಕರ್ಫ್ಯೂ ಮುಗಿಯುವವರೆಗೆ ಪುತ್ತೂರು ವಾರ ಸಂತೆಯನ್ನು ರದ್ದುಪಡಿಸಲಾಗಿದೆ.
ಅಲ್ಲದೇ ಅಲ್ಲಿನ ಹೊರ ಆವರಣದಲ್ಲಿ ಕೂಡಾ ಯಾವುದೇ ಸಂತೆ ವ್ಯಾಪರ ನಡೆಸದಂತೆ ಸೂಚಿಸಲಾಗಿದೆ. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿ ಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.