ಕಿನ್ನಿಗೋಳಿ: ಸ್ಕಾರ್ಪ್- ಕೇಸರಿ ಶಾಲು ವಿವಾದ ಸುಖಾಂತ್ಯ
Update: 2022-01-06 23:11 IST
ಮುಲ್ಕಿ: ಕಳೆದ ಎರಡು ದಿನಗಳಿಂದ ಕಿನ್ನಿಗೋಳಿ ಸಮೀಪದ ಕಾಲೇಜಿನಲ್ಲಿ ನಡೆದ ಸ್ಕಾರ್ಪ್-ಕೇಸರಿ ಶಾಲು ವಿವಾದವು ಸೌಹಾರ್ದತೆಯ ಮೂಲಕ ಬಗೆಹರಿದಿದೆ ಎಂದು ತಿಳಿದುಬಂದಿದೆ.
ಕಿನ್ನಿಗೋಳಿ ಸಮೀಪದ ಐಕಳ ಪಂಚಾಯತ್ ವ್ಯಾಪ್ತಿಯ ದಾಮಸ್ ಕಟ್ಟೆ ಬಳಿಯ ಪೊಂಪೈ ಕಾಲೇಜಿನಲ್ಲಿ ಮಂಗಳವಾರ ಸ್ಕಾರ್ಪ್-ಕೇಸರಿ ಶಾಲು ವಿವಾದ ಪ್ರಾರಂಭವಾಗಿದ್ದು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಸ್ಕಾರ್ಪ್ ಹಾಗು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿ ಗೊಂದಲದ ವಾತಾವರಣ ಸೃಷ್ಟಿಯಾಗಿ ಬುಧವಾರ ಮಧ್ಯಾಹದ ಬಳಿಕ ಶಾಲೆಗೆ ರಜೆ ನೀಡಲಾಗಿತ್ತು.
ಗುರುವಾರ ಸಂಜೆ ಕಾಲೇಜಿನಲ್ಲಿ ಆಡಳಿತ ಮಂಡಳಿ, ಊರಿನ ಗಣ್ಯರು, ಪೊಲೀಸ್ ಇಲಾಖೆ ಮತ್ತು ಎರಡು ಧರ್ಮದ ಮುಖಂಡರ ಸಭೆಯಲ್ಲಿ ವಿವಾದ ಸೌಹಾರ್ದಯುತವಾಗಿ ಬಗೆಹರಿದಿದೆ ಎಂದು ತಿಳಿದುಬಂದಿದೆ.