ಉತ್ತರ ಕೊರಿಯಾ: ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ

Update: 2022-01-06 18:03 GMT
photo:PTI

ಪಾಂಗ್ಯಾಂಗ್, ಜ.6: ಉತ್ತರ ಕೊರಿಯಾವು ಹೈಪರ್‌ಸಾನಿಕ್ ಸಿಡಿತಲೆ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ್ದು ಇದು ಈ ವರ್ಷದ 2 ದಿನದಲ್ಲಿ ನಡೆಸಿದ 2ನೇ ಪರಮಾಣು ಕ್ಷಿಪಣಿ ಪರೀಕ್ಷೆಯಾಗಿದೆ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮ ಗುರುವಾರ ವರದಿ ಮಾಡಿದೆ.

ಅತ್ಯಂತ ವೇಗವಾಗಿ ಚಲಿಸುವ ಮತ್ತು ಅತ್ಯಂತ ಚುರುಕಾದ ಸೂಪರ್ಸಾನಿಕ್ ಕ್ಷಿಪಣಿಗಳನ್ನು ಕ್ಷಿಪಣಿ ನಿರೋಧಕ ವ್ಯವಸ್ಥೆಯೂ ಪತ್ತೆಹಚ್ಚಲು ಕಷ್ಟವಾಗುತ್ತದೆ.

ಬುಧವಾರ ಉಡಾಯಿಸಲಾದ ಕ್ಷಿಪಣಿಯು ಹೈಪರ್‌ಸಾನಿಕ್ ಸಿಡಿತಲೆಯನ್ನು ಹೊಂದಿದ್ದು ಇದು 700 ಕಿ.ಮೀ ದೂರದ ಗುರಿಯನ್ನು ಯಶಸ್ವಿಯಾಗಿ ತಲುಪಿದೆ . . ಲಾಂಚರ್‌ನಿಂದ  ಬೇರ್ಪಟ್ಟ ಬಳಿಕ 120 ಕಿ.ಮೀ ಪಾರ್ಶ್ವವಾಗಿ ಚಲಿಸುವ ಆಧುನಿಕ ಸಾಮರ್ಥ್ಯವನ್ನು ಈ ಕ್ಷಿಪಣಿ ಪ್ರದರ್ಶಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News