×
Ad

ನಟಿ ಸ್ವರಾ ಭಾಸ್ಕರ್‌ ಗೆ ಕೋವಿಡ್‌ ಪಾಸಿಟಿವ್:‌ ಟ್ವಿಟರ್‌ ನಾದ್ಯಂತ ಬಲಪಂಥೀಯರಿಂದ ಸಂಭ್ರಮಾಚರಣೆ

Update: 2022-01-07 16:01 IST

ಹೊಸದಿಲ್ಲಿ: ಬಲಪಂಥೀಯರ ಮತ್ತು ಸಂಘಪರಿವಾರ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತುವ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ತಮಗೆ ಕೋವಿಡ್‌ ಪಾಸಿಟಿವ್‌ ಆದ ವಿಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿದ್ದರು. ಪ್ರತಿಯೊಬ್ಬರೂ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಟ್ವಿಟರ್‌ ನಾದ್ಯಂತ ಸ್ವರಾ ಭಾಸ್ಕರ್‌ ಟ್ರೋಲ್‌ ಗೊಳಗಾಗಿದ್ದು ಮಾತ್ರವಲ್ಲದೇ ಅವರಿಗೆ ಕೋವಿಡ್‌ ಸೋಂಕು ತಗಲಿರುವುದರ ಕುರಿತು ಸಂಭ್ರಮಾಚರಣೆ ನಡೆಸಲಾಗುತ್ತಿದೆ.

ಹಲವು ಅಸಹ್ಯ ಮತ್ತು ಅಶ್ಲೀಲ ಭಾಷೆಗಳಲ್ಲೂ ಟ್ವೀಟ್ ಮಾಡಲಾಗುತ್ತಿದೆ.‌ "ಕೋವಿಡ್-‌೧೯ ಗೆ ಸ್ವರಾ ಭಾಸ್ಕರ್‌ ಎಂಬ ಅತೀದೊಡ್ಡ ವೈರಸ್‌ ತಗಲಿದೆ. ಕೋವಿಡ್‌ ಅನ್ನು ಕಾಪಾಡಬೇಕಾಗಿ ಪ್ರಧಾನಿಯಲ್ಲಿ ಮನವಿ ಮಾಡುತ್ತಿದ್ದೇವೆ" ಎಂದು ವ್ಯಕ್ತಿಯೋರ್ವ ಟ್ವೀಟ್‌ ಮಾಡಿದ್ದರೆ, ಇನ್ನು ಕೆಲವರು ಅಶ್ಲೀಲ ಚಿತ್ರಗಳನ್ನು ಮತ್ತು ಕಾಮೆಂಟ್‌ ಗಳನ್ನು ಹಾಕಿ ವಿಕೃತಿ ಮೆರೆದಿದ್ದಾರೆ.

ಇನ್ನು ಹಲವಾರು ಮಂದಿ ಅಭಿಮಾನಿಗಳು ಸ್ವರಾಭಾಸ್ಕರ್‌ ಹಾಗೂ ಅವರ ಕುಟುಂಬವು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News