ಉಡುಪಿ: ಮಾಸ್ಕ್ ಧರಿಸದೆ ಓಡಾಟ; 7500ರೂ. ದಂಡ ವಸೂಲಿ
Update: 2022-01-07 18:48 IST
ಉಡುಪಿ, ಜ.7: ಜಿಲ್ಲೆಯಾದ್ಯಂತ ಜ.6ರಂದು ಮಾಸ್ಕ್ ಧರಿಸದೆ ಓಡಾಡು ತ್ತಿದ್ದ ಒಟ್ಟು 75 ಮಂದಿಯಿಂದ 7500ರೂ. ದಂಡ ವಸೂಲಿ ಮಾಡಲಾಗಿದೆ.
ಉಡುಪಿ ನಗರಸಭೆ ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ 6500ರೂ., ಅಬಕಾರಿ ಇಲಾಖಾ ವ್ಯಾಪ್ತಿಯಲ್ಲಿ 200ರೂ., ಮೀನುಗಾರಿಕಾ ಇಲಾಖೆಯಿಂದ 700ರೂ. ದಂಡ ವಸೂಲಿ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 59,73,770ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.