ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಪದವಿ ಕಾಲೇಜಿನ ‘ಮಹಿಳಾ ಸಬಲೀಕರಣ’ ವಿಭಾಗ ಉದ್ಘಾಟನೆ
ಕಾರ್ಕಳ, ಜ.7: ಇಲ್ಲಿನ ಶ್ರೀ ವೆಂಕಟರಮಣ ಮಹಿಳಾ ಪದವಿ ಕಾಲೇಜಿನ ‘ಮಹಿಳಾ ಸಬಲೀಕರಣ’ ವಿಭಾಗವು ಬುಧವಾರ ಉದ್ಘಾಟನೆಗೊಂಡಿತು.
ಹಿರಿಯ ಸಮಾಜ ಸೇವಕಿ, ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದ ನಿರ್ದೇಶಕಿ ಹಿಲ್ಡಾ ರಾಯಪ್ಪನ್ 'ಮಹಿಳಾ ಸಬಲೀಕರಣ' ವಿಭಾಗವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯ ಕನಸು ಜೀವಂತಗೊಳ್ಳಬೇಕು, ಪುರುಷ_ ಮಹಿಳೆಯ ನಡುವೆ ಸಮಾನತೆ ಉಳಿದುಕೊಳ್ಳುವಂತೆ ಮನೆಯಲ್ಲಿ ಮಕ್ಕಳನ್ನು ಬೆಳೆಸಬೇಕು. ಮಹಿಳೆಗೆ ಅವಳದೇ ಸ್ವಂತ ದುಡಿಮೆಯ ಸಂಪಾದನೆ, ಸ್ವಾವಲಂಬಿತನ ಅವಳ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಮಹಿಳೆ ಆತ್ಮಗೌರವದಿಂದ ತಲೆಯೆತ್ತಿ ನಡೆಯುವುದೇ ಅವಳ ಸಬಲೀಕರಣ ಎಂದು ಹೇಳಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ 'ಮಹಿಳಾ ಸಬಲೀಕರಣ' ವಿಭಾಗದ ಮುಖ್ಯಸ್ಥೆ, ಕನ್ನಡ ಉಪನ್ಯಾಸಕಿ ಆರ್.ಜ್ಯೋತಿ, ಮಹಿಳೆ ಸಬಲೆಯಾಗುವ ಪ್ರಯತ್ನ ಅವಳಿಂದಲೇ ನಡೆದು ಅವಳ ಶೋಷಣೆ ಕೊನೆಯಾಗಬೇಕು ಎಂದರು.
ಪ್ರಾಂಶುಪಾಲೆ ಪ್ರೊ.ಉಷಾ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿನಿ ಪದಾಧಿಕಾರಿಗಳಾದ ಚೈತನ್ಯಾ ಮತ್ತು ಲಾವಣ್ಯಾ ಉಪಸ್ಥಿತರಿದ್ದರು. ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯಾ ವಂದಿಸಿದರು. 'ಮಹಿಳಾ ಸಬಲೀಕರಣ' ವಿಭಾಗದ ಸದಸ್ಯ ವಿದ್ಯಾರ್ಥಿನಿಯರು ಸೇರಿ ‘ಮಾನವಕೋಟಿಯ ಸಲಹುವ ಶಕ್ತಿ ಮಹಿಳೆಯು ತಾ ತಿಳಿಯೇ’ ಎಂಬ ಆಶಯಗೀತೆ ಹಾಡಿದರು