×
Ad

ಉಡುಪಿ ಧರ್ಮಪ್ರಾಂತದ ಮಿಲಾಗ್ರಿಸ್ ಹೋಮ್ ಉದ್ಘಾಟನೆ

Update: 2022-01-07 20:14 IST

ಉಡುಪಿ, ಜ.7: ಉಡುಪಿ ಧರ್ಮಪ್ರಾಂತದ ನಿವೃತ್ತ ಧರ್ಮಗುರುಗಳ ವಸತಿ ಸಮುಚ್ಛಯ ಮಿಲಾಗ್ರಿಸ್ ಹೋಮ್ ಇದರ ಉದ್ಘಾಟನೆ ಮತ್ತು ಅಶೀರ್ವಚನ ಕಾರ್ಯಕ್ರಮವು ಜ.6ರಂದು ಕಲ್ಯಾಣಪುರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಆಗ್ರಾ ಧರ್ಮಪ್ರಾಂತದ ನಿವೃತ್ತ ಮಹಾಧರ್ಮಾಧ್ಯಕ್ಷ ಡಾ.ಆಲ್ಬರ್ಟ್ ಡಿಸೋಜ ಉದ್ಘಾಟಿಸಿದರು. ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಪ್ರಾರ್ಥನಾ ವಿಧಿಯನ್ನು ನಡೆಸಿ ಕೊಟ್ಟರು.

ಮಂಗಳೂರಿನ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನಾ ವಸತಿ ಸಮುಚ್ಛಯದಲ್ಲಿ ನಿರ್ಮಿಸಲಾದ ಮಾತೆ ಮರಿಯಮ್ಮನವರ ಗ್ರೊಟ್ಟೊವಿನ ಆಶೀರ್ವಚನ ನಡೆಸಿದರು ಹಾಗೂ ಉಡುಪಿಯ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಲೋಬೊವರು ಹೊಸ ಜನರೇಟರ್ ಹಾಗೂ ವಾಹನವನ್ನು ಆಶೀರ್ವಚನ ಗೈದರು.

ಈ ಸಂದರ್ಭದಲ್ಲಿ ಮಿಲಾಗ್ರಿಸ್ ಹೋಮ್ ವಸತಿ ಸಮುಚ್ಛಯಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಮತ್ತು ಹಿತೈಷಿಗಳನ್ನು ಸನ್ಮಾನಿಸಲಾಯಿತು. ಧರ್ಮಪ್ರಾಂತದ ಧರ್ಮಗುರುಗಳು, ಭಗಿನಿಯರು ಹಾಜರಿದ್ದರು. ಮಿಲಾಗ್ರಿಸ್ ಪ್ರಧಾನಾಲಯ ಚರ್ಚಿನ ಗುರು ಫಾ.ವಲೇರಿಯ ಮೆಂಡೊನ್ಸಾ ಸ್ವಾಗತಿಸಿ, ಫಾ.ಅನಿಲ್ ಕಸ್ತೆಲಿನೊ ವಂದಿಸಿದರು. ವಸತಿ ಸಮುಚ್ಛಯ ನಿರ್ಮಾಣದ ಮೇಲ್ವಿಚಾರಕ ಫಾ.ರೋಮಿಯೊ ಲುವಿಸ್ ವರದಿ ವಾಚಿಸಿದರು. ಫಾ.ಡೆನಿಸ್ ಡೆಸಾ ಹಾಗೂ ರೋಯ್ಸನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿ ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಧರ್ಮಗುರುಗಳಿಗೆ ಜೀವನದ ಉತ್ತರಾರ್ಧದಲ್ಲಿ ಶಾಂತಿ ಹಾಗು ನೆಮ್ಮದಿಯನ್ನು ನೀಡುವ ತಾಣ ಮಿಲಾಗ್ರಿಸ್ ಹೋಮ್ ಆಗಿದ್ದು, ಇದು ಕಲ್ಯಾಣಪುರದ ಮಿಲಾಗ್ರಿಸ್ ಪ್ರಧಾನ ಚರ್ಚಿನ ಮುಂಭಾಗದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News