ಮದುವೆಯ ಪಾವಿತ್ರ್ಯತೆಗೆ ಕಳಂಕ ತರುವ ವೇಷಭೂಷಣಗಳನ್ನು ಇಸ್ಲಾಂ ವಿರೋಧಿಸುತ್ತದೆ: ಅಶ್ರಫ್‌ ಸಖಾಫಿ ಸವಣೂರು

Update: 2022-01-07 15:18 GMT

ಮಂಗಳೂರು: ಪವಿತ್ರ ಇಸ್ಲಾಂ ಮದುವೆಗೆ ಅತ್ಯುನ್ನತವಾದ ಸ್ಥಾನವನ್ನು ಕಲ್ಪಿಸಿದೆ. ಪ್ರವಾದಿ (ಸ.ಅ)ರು ಕಳಿಸಿಕೊಟ್ಟ ಚರ್ಯೆಯೂ ಆಗಿದೆ. ಆ ಸುಂದರವಾದ ಇಸ್ಲಾಮಿನ ಆಚಾರವನ್ನು ಗಾಳಿಗೆ ತೂರಿ ಅನಿಸ್ಲಾಮಿಕವಾದ ವೇಷ ಭೂಷಣಗಳಿಂದ ಮದುವೆಯ ಸುಂದರ ಸ್ವರೂಪವನ್ನೇ ನುಚ್ಚುನೂರು ಮಾಡುತ್ತಿರುವ ದೃಷ್ಯವೂ ಕಣ್ಣ ಮುಂದೆ ಬಂದೆರಗಿದೆ. ಮನುಷ್ಯ ತಪ್ಪು ಮಾಡುವಾಗ ತಿದ್ದಲು ಅಲ್ಲಾಹನು ನಿರಂತರವಾಗಿ ವಿವಿದ ರೀತಿಯಲ್ಲಿ ಶಿಕ್ಷೆಗಳನ್ನು ನೀಡುವ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದಾನೆ. ಹಕ್ಕಿ ಜ್ಚರ, ಪ್ರಳಯ, ಕೊರೋನದಂತಹ ಮಹಾಮಾರಿಗಳನ್ನು ಲೋಕಕ್ಕೆ ಸುರಿದರೂ ಮನುಷ್ಯ ಇನ್ನೂ ಪಾಠ ಕಲಿತಂತಿಲ್ಲ. ಇಹದ ಮೋಜಿನಲ್ಲಿ ಇಸ್ಲಾಮಿನ ಸುಂದರ ಆಚಾರಕ್ಕೆ ಮಸಿ ಬಳಿಯುವ ರೀತಿಯಲ್ಲಿ ಯುವಕರ ಹೆಜ್ಜೆಯೂ ಅತ್ಯಂತ ಖೇದಕರ ಎಂದು ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಮುದರ್ರಿಸರಾದ ಅಶ್ರಫ್ ಸಖಾಫಿ ಸವಣೂರು ಹೇಳಿದ್ದಾರೆ. 

ತಾಳ ಎಂಬ ಹೆಸರಿನಲ್ಲಿ ವರ್ಷಗಳ ಮುಂಚೆ ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿದ್ದ ಯುವಕರು ಈಗ ವರನಿಗೆ ವಿಚಿತ್ರ ವೇಷ ಧರಿಸಿ ವಧುವಿನ ಮನೆಗೆ ಕರೆತರುವ ಅತ್ಯಂತ ನೀಚ ಕೃತ್ಯಗಳಾಗಿವೆ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತು ವೀಕ್ಷಿಸುತ್ತಿರುವುದು. ಇಂತಹ ನೀಚ ಕಾರ್ಯದಿಂದ ಮುಸ್ಲಿಂ ಸಮುದಾಯ ತಲೆತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಇಂತಹ ಕೆಟ್ಟ ಅನಾಚಾರಗಳ ವಿರುದ್ದ ಪ್ರತಿಯೊಂದು ಜಮಾಹತಿನ ನೇತಾರರು ಅತ್ಯಂತ ಕಠಿಣವಾದ ನಿಯಮಗಳನ್ನು ತರುವ ಮೂಲಕ ಸಮುದಾಯದ ಪ್ರೌಢಿಮೆಯನ್ನು ನೆಲೆಯೂರಿಸಬೇಕಾಗಿದೆ ಎಂದು ಅವರು ಜುಮಾ ನಮಾಝ್‌ ಬಳಿಕದ ಮಾತಿನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News