ಉಡುಪಿ: ಕೋವಿಡ್ ಆರೈಕೆ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ
ಉಡುಪಿ, ಜ.7: ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿ ರುವುದರಿಂದ ಕೋವಿಡ್ ಸೋಂಕು ಬಾಧಿತ ವ್ಯಕ್ತಿ ಗಳಿಗೆ, ಆಸ್ಪತ್ರೆಯಲ್ಲಿ ಆಕ್ಸಿಜನ್‌ನ ಅವಶ್ಯಕತೆ ಇಲ್ಲದೇ ಹೋಂ ಐಸೋಲೇಷನ್ ಆಗಬೇಕಾದವರಿಗೆ, ಮನೆಯಲ್ಲಿ ಹೋಂ ಐಸೋಲೇಷನ್ ಸಮಸ್ಯೆ ಇರುವವರಿಗೆ ಅಥವಾ ಇತರ ಕಾರಣದಿಂದಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವ ಪ್ರಕರಣಗಳಲ್ಲಿ ಅನುಕೂಲವಾಗುವಂತೆ ತಾಲೂಕು ಕೇಂದ್ರದಲ್ಲಿ ತೆರೆಯಲಾಗಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.
ಕುಂದಾಪುರ ತಾಲೂಕಿನ ಹಳೇ ಆದರ್ಶ ಆಸ್ಪತ್ರೆ ಕೋವಿಡ್ ಆರೈಕೆ ಕೇಂದ್ರಕ್ಕೆ ಭೂದಾಖಲೆಗಳ ಸಹಾಯಕ ನಿರ್ದೇಶಕ ಪುಷ್ಪರಾಜ್ ಪೂಜಾರಿ (ಮೊ.ನಂ: 9844545668), ಕಾರ್ಕಳ ತಾಲೂಕಿನ ಮಿಯಾರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ನಿಲಯ ಹಾಗೂ ನಿಟ್ಟೆಯ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಆರೈಕೆ ಕೇಂದ್ರಗಳಿಗೆ ಅಕ್ಷರ ದಾಸೋಹ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ಟಿ (ಮೊ.ನಂ: 9449494011), ಹೆಬ್ರಿ ತಾಲೂಕಿನ ಆರೋಗ್ಯ ಸಮುದಾಯ ಭವನದ ಆರೈಕೆ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್ ಶೆಟ್ಟಿ (ಮೊ.ನಂ: 9448847958) ಹಾಗೂ ಉಡುಪಿ ತಾಲೂಕಿನ ಮಣಿಪಾಲ ಎಂಐಟಿ ಹಾಸ್ಟೆಲ್‌ನ ಆರೈಕೆ ಕೇಂದ್ರಕ್ಕೆ ಭೂದಾಖಲೆಗಳ ಸಹಾಯಕ ನಿರ್ದೇಶಕ ತಿಪ್ಪೇರಾಯ ಕರೆಪ್ಪ ತೊರವಿ (ಮೊ.ನಂ: 8277040047) ಇವರನ್ನು ನೇಮಕ ಮಾಡಲಾಗಿದೆ.
ನಿಯೋಜಿತ ಅಧಿಕಾರಿಗಳು ಕೋವಿಡ್ ಆರೈಕೆಗೆ ದಾಖಲಾಗುವವರ ದಿನಂಪ್ರತಿ ವಿವರಗಳನ್ನು ಜಿಲ್ಲಾ ಕೋವಿಡ್ ಆರೈಕೆ ಕೇಂದ್ರದ ನೋಡೆಲ್ ಅಧಿಕಾರಿಯಾದ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್ (ಮೊ.ನಂ:9980530447), ಇ-ಮೇಲ್-pcmalpe@yahoo.com- ಇವರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.