×
Ad

ವೀಕೆಂಡ್ ಕರ್ಫ್ಯೂ; ದ.ಕ. ಜಿಲ್ಲೆಯಲ್ಲಿ ಬಸ್ಸುಗಳ ಸಂಚಾರ ಅಬಾಧಿತ

Update: 2022-01-08 10:04 IST

ಮಂಗಳೂರು : ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಬಸ್ಸುಗಳ ಸಂಚಾರ ಅಬಾಧಿತವಾಗಿದೆ‌. ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹಾಗಿದ್ದರೂ ಜನ ಸಂಚಾರವು ಕಂಡು ಬರುತ್ತಿದೆ.

ಕ್ಲಾಕ್ ಟವರ್ ಬಳಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಕಾರಣವಿಲ್ಲದೆ ವಾಹನಗಳಲ್ಲಿ ಸಂಚಾರ ಮಾಡುವವರನ್ನು ತಡೆದು ದಂಡ ಹಾಕುವ ಪ್ರಕ್ರಿಯೆ ಪೊಲೀಸರಿಂದ ನಡೆಯುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News