×
Ad

ಮದುವೆ ಸಮಾರಂಭದಲ್ಲಿ ಕೊರಗಜ್ಜನಿಗೆ ಅವಹೇಳನ ಖಂಡನೀಯ : ಅಕ್ಷಿತ್‌ ಸುವರ್ಣ

Update: 2022-01-08 10:22 IST
ಅಕ್ಷಿತ್‌ ಸುವರ್ಣ

ಮಂಗಳೂರು : ಮದುವೆ ಸಮಾರಂಭದ ಔತಣಕೂಟದಲ್ಲಿ ವರನಿಗೆ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷ ಹಾಕಿ, ಕೊರಗಜ್ಜನಿಗೆ ಅವಮಾನ ಮಾಡಿರುವ ರೀತಿ ವರ್ತಿಸಿರುವುದು ಖಂಡನೀಯವಾಗಿದೆ ಎಂದು ದ.ಕ. ಜಿಲ್ಲಾ ಯುವ ಜೆಡಿಎಸ್‌ ಅಧ್ಯಕ್ಷ ಅಕ್ಷಿತ್‌ ಸುವರ್ಣ ಹೇಳಿದ್ದಾರೆ.

ತುಳುನಾಡಿನಲ್ಲಿ ದೈವರಾಧನೆಯ ಬಗ್ಗೆ ಒಂದು ರೀತಿಯ ವಿಕೃತಿಯನ್ನು ಮೆರೆದಿರಿವುದು ಯಾವುದೇ ಸಮುದಾಯ ಕೂಡ ಒಪ್ಪತಕ್ಕ ವಿಚಾರವಲ್ಲ. ಯಾವುದೇ ರೀತಿಯ ಆಚರಣೆಗಳಲ್ಲಿ ಯಾವುದೇ ಧರ್ಮ ಮತ್ತು ಅದರ ಸಂಸ್ಕೃತಿಯನ್ನು ಅವಮಾನ ಮಾಡುವುದು ಸಮಾಜದಲ್ಲಿ ಸರಿಯಲ್ಲ, ಇಂತಹ ಘಟನೆಗೆ ಕಾರಣರಾದವರ ವಿರುದ್ಧ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ವಿಕೃತ ಸಂಸ್ಕೃತಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News