×
Ad

ಜ. 21ರಿಂದ ಸಿದ್ಧಲಿಂಗಯ್ಯ ಬದುಕು-ಬರಹ ವಿಚಾರ ಸಂಕಿರಣ

Update: 2022-01-08 20:38 IST

ಉಡುಪಿ, ಜ.8: ಕರ್ನಾಟಕ ಸಾಹಿತ್ಯ ಅಕಾಡಮಿಯ ವತಿಯಿಂದ ಜನವರಿ 21 ಮತ್ತು 22ರಂದು ಡಾ.ಸಿದ್ಧಲಿಂಗಯ್ಯನವರ ಬದುಕು- ಬರಹ ಎಂಬ ರಾಜ್ಯ ಮಟ್ಟದ ವಿಚಾರಸಂಕಿರಣವನ್ನು ಹಮ್ಮಿಕೊಂಡಿದ್ದು, ಈ ವಿಚಾರಸಂಕಿರಣದಲ್ಲಿ ಪರ್ಯಾಯ ಗೋಷ್ಠಿಗಳು ನಡೆಯಲಿವೆ.

ವಿಚಾರ ಸಂಕಿರಣದ ಪರ್ಯಾಯ ಗೋಷ್ಠಿಯಲ್ಲಿ ಡಾ.ಸಿದ್ಧಲಿಂಗಯ್ಯನವರ ಬದುಕು- ಬರಹ ಕುರಿತಾಗಿ ಪ್ರಬಂಧ ಮಂಡಿಸುವವರು, ಜ.12ರೊಳಗೆ ಅಕಾಡೆಮಿಗೆ ರಿಜಿಸ್ಟರ್ ಅಥವಾ ಕೊರಿಯರ್ ಮೂಲಕ ಅರ್ಜಿಯೊಂದಿಗೆ ಪ್ರಬಂಧಗಳನ್ನು ಸಲ್ಲಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ವೆಬ್‌ಸೈಟ್  ಸಂಪರ್ಕಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News