ಉಡುಪಿ: ಮಾಲಕನ ಸ್ಕೂಟರ್ ಕಳವುಗೈದ ಹೊಟೇಲ್ ನೌಕರ !
Update: 2022-01-08 20:42 IST
ಉಡುಪಿ, ಜ.8: ಹೊಟೇಲ್ ನೌಕರನೊರ್ವ ತನ್ನ ಮಾಲಕನ ಸ್ಕೂಟರ್ ಕಳವುಗೈದು ಪರಾರಿಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಶಾಂತಿನಗರದ ಸಂತೋಷ ಎಂಬವರ ವೇದಾಂತ್ ಹೊಟೇಲಿಗೆ ಜ.3ರಂದು ಶ್ರೀಧರ ಬೈಂದೂರು ಎಂಬಾತನು ಕೆಲಸಕ್ಕೆ ಸೇರಿದ್ದು, ಜ.5ರಂದು ಸಂಜೆ ಹೊಟೇಲಿನ ಡ್ರಾವರ್‌ನಲ್ಲಿಟ್ಟಿದ್ದ ದ್ವಿಚಕ್ರ ವಾಹನದ ಕೀಯನ್ನು ತೆಗೆದು ಕೊಂಡು ಸಂತೋಷ್ ಅವರಿಗೆ ತಿಳಿಯದಂತೆ ಹೋಟೇಲ್‌ನ ಹೊರಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದಾನೆ. ಕಳವಾದ ಸ್ಕೂಟರ್‌ನ ಮೌಲ್ಯ 35,000ರೂ. ಎಂದು ಅಂದಾಜಿಸಲಾಗಿದೆ.