ವಾಮಂಜೂರು: ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಸಭೆ
Update: 2022-01-08 21:50 IST
ಮಂಗಳೂರು, ಜ.8: ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಸುರತ್ಕಲ್ ವಲಯದ ವಾಮಜೂರು ಘಟಕದ ಸಭೆಯು ಶನಿವಾರ ಇಲ್ಲಿನ ರಾಮ ಭಜನ ಮಂದಿರದ ಮಿನಿ ಹಾಲ್ ನಲ್ಲಿ ನಡೆಯಿತು.
ಘಟಕದ ನೂತನ ಅಧ್ಯಕ್ಷರಾಗಿ ರವಿಂದ್ರನ್, ಉಪಾಧ್ಯಕ್ಷರಾಗಿ ಹಸನಬ್ಬ, ಕಾರ್ಯದರ್ಶಿಯಾಗಿ ಅಕ್ಬರ್ ಆಯ್ಕೆಯಾದರು. ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಮಾತನಾಡಿದರು.