×
Ad

​ಕಾವೂರು: ರಿಕ್ಷಾ ಟೆಂಪೋ ಮಗುಚಿ ಚಾಲಕ ಮೃತ್ಯು

Update: 2022-01-08 22:00 IST

ಮಂಗಳೂರು, ಜ.8: ನಗರ ಹೊರವಲಯದ ಕಾವೂರಿನಲ್ಲಿ ರಿಕ್ಷಾ ಟೆಂಪೊವೊಂದು ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಕಾವೂರಿನ ಶ್ರೀಕಾಂತ್ (60) ಮೃತಪಟ್ಟವರು.

ಇವರು ಕಾವೂರು-ಪಂಜಿಮೊಗರು ರಸ್ತೆಯಲ್ಲಿ ಚಲಾಯಿಸುತ್ತಿದ್ದ ರಿಕ್ಷಾ ಟೆಂಪೋ ಏಕಾಏಕಿ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಸಂಚಾರ ಉತ್ತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News