×
Ad

ಕಿನ್ಯ: ಎಸ್‌ವೈಎಸ್ ವತಿಯಿಂದ ಅಧ್ಯಯನ ಶಿಬಿರ

Update: 2022-01-08 22:02 IST

ಮಂಗಳೂರು : ಎಸ್‌ವೈಎಸ್ ಕಿನ್ಯ ಸೆಂಟರ್ ಅಧೀನದ ಬದ್ರಿಯಾ ನಗರ ಬ್ರಾಂಚ್ ಸಮಿತಿಯ ವತಿಯಿಂದ 'ಸಾಂಘಿಕ ಕಾರ್ಯಾಚರಣೆಯ ಸಕ್ರಿಯತೆಗಾಗಿ' ಇತ್ತೀಚೆಗೆ ಅಧ್ಯಯನ ಶಿಬಿರ ನಡೆಯಿತು.

ಶಿಬಿರದಲ್ಲಿ ವಿಷಯ ಮಂಡಿಸಿದ ಮುಸ್ಲಿಂ ಜಮಾಅತ್ ಕಾಸರಗೋಡು ಬದಿಯಡ್ಕ ರೆನ್ ಸಮಿತಿ ಅಧ್ಯಕ್ಷ ಕುಂಬಡಾಜೆ ಅಬೂಬಕರ್ ಫೈಝಿ ಪವಿತ್ರ ಇಸ್ಲಾಮಿನ ಆದರ್ಶ, ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿ, ಸೃಷ್ಟಿಕರ್ತ ಅಲ್ಲಾಹನ ಆಜ್ಞೆಗಳನ್ನು ಪಾಲಿಸಿ ಕೆಡುಕಿ ನಿಂದ ದೂರ ನಿಂತು ಬದುಕುವುದರ ಜತೆಗೆ ಸಜ್ಜನರ ಸಹವಾಸವನ್ನು ಬೆಳೆಸಿದಾಗ ಮಾತ್ರ ನೈಜ ನೈತಿಕ ಜೀವನ ಸಾಧ್ಯ ಎಂದು ಹೇಳಿದರು.

ಎಸ್‌ವೈಎಸ್ ಬದ್ರಿಯಾನಗರ ಬ್ರಾಂಚ್ ಅಧ್ಯಕ್ಷ ಕೆ.ಎಚ್. ಮೂಸಕುಂಞಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಅಧ್ಯಯನ ಶಿಬಿರವನ್ನು ಉದ್ಘಾಟಿಸಿದರು. ಎಸ್‌ವೈಎಸ್ ದ.ಕ ವೆಸ್ಟ್ ಅಧ್ಯಕ್ಷ ಅಶ್‌ಅರಿಯ್ಯ ಮುಹಮ್ಮದ್ ಅಲಿ ಸಖಾಫಿ, ಕಿನ್ಯ ಸೆಂಟರ್ ಸಮಿತಿಯ ಅಧ್ಯಕ್ಷ ಹಾಜಿ ಬಿ.ಎಂ. ಇಸ್ಮಾಯಿಲ್ ಪರಮಾಂಡ ಮಾತನಾಡಿದರು.

ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಕೆ.ಎಂ. ಸಯೀದ್ ಅವರನ್ನು ಮೀಂಪ್ರಿ ಎಸ್ಸೆಸ್ಸೆಫ್ ವತಿಯಿಂದ ಕಿನ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಕೂಡಾರ, ಕೋಶಾಧಿಕಾರಿ ಹುಸೈನಾರ್ ಮೀಂಪ್ರಿ ಅಭಿನಂದಿಸಲಾಯಿತು.

ಸೈಯದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ದುಆಗೆ ನೇತೃತ್ವ ನೀಡಿದರು. ಎಸ್‌ವೈಎಸ್ ರಾಜ್ಯ ನಾಯಕ ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ದ.ಕ. ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಮೀಡಿಯಾ ಕಾರ್ಯದರ್ಶಿ ಫಾರೂಕ್ ತಲಪಾಡಿ, ಕಿನ್ಯ ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಇಸ್ಮಾಯಿಲ್ ಸಾಗ್, ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ, ಬದ್ರಿಯಾನಗರ ಬ್ರಾಂಚ್ ಕೋಶಾಧಿಕಾರಿ ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News