×
Ad

ಪಡುಬಿದ್ರೆ: ರಸ್ತೆ ಮಧ್ಯೆ ವಿದ್ಯಾರ್ಥಿಗಳ‌ ಹೊಡೆದಾಟ

Update: 2022-01-08 22:18 IST

ಪಡುಬಿದ್ರೆ: ಮಾದಕ ವಸ್ತು ಸೇವಿಸಿದ್ದಾರೆನ್ನಲಾದ ಮಣಿಪಾಲದ ವಿದ್ಯಾರ್ಥಿಗಳ ಹೊಡೆದಾಟದಿಂದ ಕೆಲಕಾಲ ಪಡುಬಿದ್ರೆ ಪೇಟೆಯಲ್ಲಿ ಗೊಂದಲದ ವಾತಾವರಣ ಉಂಟಾದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಇಬ್ಬರು ವಿದ್ಯಾರ್ಥಿಗಳು ಹಾಗೂ ಓರ್ವ ವಿದ್ಯಾರ್ಥಿನಿ ಸೇರಿ ಮೂವರು ಸ್ಕೂಟರ್‌ನಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತಿದ್ದರು. ಈ ವೇಳೆ ಪಡುಬಿದ್ರೆಯ ಬೀಡು ಎಂಬಲ್ಲಿ ಸ್ಕೂಟರ್‌ನ ಪೆಟ್ರೋಲ್ ಖಾಲಿಯಾಗಿದ್ದು, ಇಬ್ಬರು ಹುಡುಗರ ಮಧ್ಯೆ ಹೊಡೆದಾಟ ನಡೆಯಿತು. ಇದನ್ನು ಬಿಡಿಸಲು ಯುವತಿ ಪ್ರಯತ್ನಿಸುತಿದ್ದು, ಹೊಡೆದಾಟ ಇನ್ನಷ್ಟು ಜೋರಾಗುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಹೊಡೆದಾಟವಾಗಿ ಓರ್ವನ ಬಟ್ಟೆಯೂ ಕಳಚಿ ಹೋಗಿ ಮೈಮೇಲೆ ಗಾಯಗಳಾಗಿವೆ.

ಸುದ್ದಿ ತಿಳಿದ ಪೊಲೀಸರು ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ  ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದು, ನಮ್ಮನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಬೇಕು. ನಾವು ಅಲ್ಲಿಯ ವಿದ್ಯಾರ್ಥಿಗಳು. ನಮಗೆ ಇಲ್ಲಿ ಚಿಕಿತ್ಸೆ ಬೇಡ ಎಂದು ಪಟ್ಟು ಹಿಡಿದರು ಎನ್ನಲಾಗಿದೆ.

ಈ ಘಟನೆಯು ಪಡುಬಿದ್ರೆಯಲ್ಲಿ ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಯಿತು. ಬಳಿಕ ಪೊಲೀಸರು ಆಂಬುಲೆನ್ಸ್ ತರಿಸಿ ಅವರನ್ನು ಮಣಿಪಾಲಕ್ಕೆ ಕಳುಹಿಸಿಕೊಟ್ಟರು. ಅವರ ಸ್ಕೂಟರ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಮೂವರು ವಿದ್ಯಾರ್ಥಿಗಳು ಮಾಧಕ ವಸ್ತು ಸೇವನೆ ಮಾಡಿರಬೇಕು ಎಂದು ಶಂಕಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News