×
Ad

ಜ. 12ರಂದು ಅಸಂಘಟಿತ ಕಾರ್ಮಿಕರ ನೋಂದಾವಣೆ ವೇದಿಕೆಗೆ ಚಾಲನೆ

Update: 2022-01-09 19:48 IST

ಉಡುಪಿ, ಜ.9: ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿ ಸುವ ವೇದಿಕೆ(ಇ-ಶ್ರಮ) ಅಡಿಯಲ್ಲಿ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರನ್ನು ಉಚಿತವಾಗಿ ನೋಂದಾಯಿಸುವ ಕಾರ್ಯಕ್ರಮ ಜ.12ರಂದು ಸಂಜೆ 4.30ಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.

ಈ ವೇದಿಕೆಯನ್ನು ಹಿರಿಯ ನ್ಯಾಯಾಧೀಶೆ ಶರ್ಮಿಳಾ ಉದ್ಘಾಟಿಸಲಿರುವರು. ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಕುಮಾರ್, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ಉಪಸ್ಥಿತರಿರುವರು ಎಂದು ಆರ್‌ಟಿಓ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News