×
Ad

ಜ.10ರಿಂದ ದ.ಕ.ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಲಸಿಕೆ; 3.37 ಲಕ್ಷ ಮಂದಿಗೆ ಬೂಸ್ಟರ್ ಡೋಸ್

Update: 2022-01-09 20:39 IST

ಮಂಗಳೂರು, ಜ.9: ದ.ಕ. ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಮೂರನೇ ಡೋಸ್ ಮುನ್ನೆಚ್ಚರಿಕಾ ಲಸಿಕೀಕಾಕರಣ (ಪ್ರಿಕಾಶನರಿ ಡೋಸ್)ವು ಜ.10ರಿಂದ ಆರಂಭಗೊಳ್ಳಲಿದೆ.

ಹೊಸದಾಗಿ ನೋಂದಣಿ ಮಾಡುವ ಅಗತ್ಯವಿಲ್ಲ. ಎರಡನೇ ಡೋಸ್ ಪಡೆದು ಒಂಭತ್ತು ತಿಂಗಳು (39 ವಾರ) ಪೂರೈಸಿದ ಆರೋಗ್ಯ ಇಲಾಖೆ ಸಹಿತ ಮುಂಚೂಣಿ ಕಾರ್ಯಕರ್ತರು (ಪೊಲೀಸ್/ಕಂದಾಯ/ಪಂಚಾಯತ್‌ರಾಜ್/ರಕ್ಷಣಾ ಇಲಾಖೆ) ಅದರಲ್ಲೂ 60 ವರ್ಷ ಮೇಲ್ಪಟ್ಟ ಹಾಗೂ ಸಹ ಅಸ್ವಸ್ಥತೆ (ಕೋ ಮೋರ್ಬಿಡ್) ಇರುವ ನಾಗರಿಕರು ಮುನ್ನೆಚ್ಚರಿಕಾ ಲಸಿಕೆ ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ.

ಫಲಾನುಭವಿಗಳು ಆನ್‌ಲೈನ್ ಅಪಾಯಿಂಟ್‌ ಮೆಂಟ್ ಅಥವಾ ನೇರವಾಗಿ (ಆನ್‌ಸೈಟ್) ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದುಕೊಳ್ಳಬಹುದು. ಅರ್ಹ ಲಾನುಭವಿಗಳಿಗೆ ಈಗಾಗಲೇ ಪ್ರಥಮ ಮತ್ತು ಎರಡನೇ ಡೋಸ್‌ಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಎಸ್ಸೆಮ್ಮೆಸ್ ಮೂಲಕ ಬರುತ್ತದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಫಲಾನುಭವಿಗಳ ವಿವರ
*ಆರೋಗ್ಯ ಕಾರ್ಯಕರ್ತರು- 52,523
*ಮುಂಚೂಣಿ ಕಾರ್ಯಕರ್ತರು- 15,924
*60 ವರ್ಷ ಮೇಲ್ಪಟ್ಟವರು- 2,69,000
ಒಟ್ಟು: 3,37,447

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News