ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷರಿಂದ ಸಭೆ
ಉಡುಪಿ, ಜ.9: ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಕೆ. ಜಬ್ಬಾರ್ ಖಾನ್ ಸಾಹೇಬ್ ಇತ್ತೀಚೆಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲೆಯ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮುಖಂಡ ರೊಂದಿಗೆ ಸಭೆ ನಡೆಸಿ ಪಕ್ಷ ಸಂಘಟನೆಯ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಖಾಲಿದ್ ಅಹ್ಮದ್ ಸಾಹೇಬ್, ಸಾಹೀದ್ ಮುನಾವರ್, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಮುಖಂಡರಾದ ಹಸನ್ ಮಣಿಪುರ, ದಸ್ತಗೀರ್ ಸಾಹೇಬ್ ಕಂಡ್ಲೂರು, ಪ್ರಶಾಂತ್ ಜತ್ತನ್ನ, ಮುಹಮ್ಮದ್ ಗುಲ್ವಾಡಿ, ರಹಿಮಾನ್ ಹೆಜಮಾಡಿ, ಹಮ್ಮಬ್ಬ ಬ್ಯಾರಿ, ವಕ್ಫ್ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರಾದ ನಕ್ವಾ ಯಾಹ್ಯ, ಇಬ್ರಾಹಿಂ ಮಟಪಾಡಿ, ಮುಹಮ್ಮದ್ ಫಾರೂಕ್, ಶರ್ಫುದ್ದೀನ್ ಕಾಪು, ಹಸನ್ ಮಲ್ಪೆ, ನಝೀರ್ ಬಾಕರೂರು, ರಹಮತುಲ್ಲಾ ಹೂಡೆ, ರಿಯಾಝ್ ಪಳ್ಳಿ, ಇಮ್ರಾನ್ ಕಾಪು, ಅಮೀರ್ ಕಾಪು, ಮುನಾಪ್ ಕೋಡಿ, ಅಬೂಬಕ್ಕರ್ ಅಜ್ಜರಕಾಡು, ಹಾರೂನ್ ರಶೀದ್, ಯಾಸೀನ್, ನಝೀರ್ ಅಬ್ದುಲ್ ಖಾದರ್, ಮುಹಮ್ಮದ್ ರಫೀಕ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು.