ಸರಳ ಪರ್ಯಾಯೋತ್ಸವ ಆಚಣೆಗೆ ಸಹಕರಿಸಿ: ಕೃಷ್ಣಾಪುರ ಶ್ರೀ
ಉಡುಪಿ, ಜ.9: ದೇಶದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಜಾಗರೂಕತೆಯಿಂದ ನಡೆದುಕೊಂಡರೆ ಮುಂದೆ ಸಂಭವಿಸ ಬಹುದಾದ ಅನಾಹುತಗಳಿಗೆ ನಾವೇ ಹೊಣೆಗಾರರಾಗುತ್ತೇವೆ. ಆದ್ದರಿಂದ ಜನರು ಸರಕಾರ ಕೋವಿಡ್ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಿಕೊಂಡು ಈ ಬಾರಿಯ ಪರ್ಯಾಯ ಮಹೋತ್ಸವವನ್ನು ಉತ್ತಮವಾಗಿ ನಡೆಸಿಕೊಡ ಬೇಕೆಂದು ಭಾವಿ ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.
ಆದುದರಿಂದ ಮಠದ ಶಿಷ್ಯ ಹಾಗೂ ಅಭಿಮಾನಿಗಳು ಸರಕಾರದ ಕೋವಿಡ್ ನಿಯಂತ್ರಣಕ್ಕೆ ಹೊರಡಿಸಿರುವ ಮಾರ್ಗಸೂಚಿ ಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಪರ್ಯಾಯ ಮಹೋತ್ಸವದ ವೈಭೋಗಗಳೆಲ್ಲ ಸಾಂಪ್ರದಾಯಿಕವಾಗಿ ರುವುದನ್ನು ಮಾತ್ರ ನಡೆಸಿಕೊಂಡು ಬರಬೇಕು. ಉಳಿದ ಕಾಲದಲ್ಲಿ ಬಂದಂತಹ ಆಚರಣೆಗಳನ್ನು ಕೈಬಿಟ್ಟು, ಮುಖ್ಯಾದದ್ದನ್ನು ಮಾತ್ರ ಆಚರಿಸಬೇಕು. ಇದರಿಂದ ದೇವರ ಆರಾಧನೆಯ ಜೊತೆಗೆ ಜನರ ಆರೋಗ್ಯವನ್ನು ಕಾಪಾಡಿದಂತೆ ಆಗುತ್ತದೆ. ಸರಕಾರದ ಜೊತೆ ಸಹಕಾರಿಸಿದಂತೆಯೂ ಆಗುತ್ತದೆ ಎಂದು ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.