×
Ad

ಲಾಕ್‌ಡೌನ್‌ನಲ್ಲಿ ಆಟೋಮೊಬೈಲ್ ಉದ್ಯಮವನ್ನು ಅಗತ್ಯ ಸೇವೆಯಾಗಿ ಪರಿಗಣಿಸಲು ಸಿಎಗೆ ಮನವಿ

Update: 2022-01-09 20:57 IST

ಉಡುಪಿ, ಜ.9: ಸಂಪೂರ್ಣ ಲಾಕ್‌ಡೌನ್ ಸಂದರ್ಭದಲ್ಲಿ ಅಟೋ ಮೊಬೈಲ್ ಉದ್ಯಮವನ್ನು ಅಗತ್ಯ ಸೇವೆಯಾಗಿ ಪರಿಗಣಿಸು ವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಅಟೋಮೊಬೈಲ್ ಡೀಲರ್ಸ್‌ ಅಸೋಸಿಯೇಶನ್ ರಾಜ್ಯ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅಸೋಸಿಯೇಶನ್, ಅಗತ್ಯ ವಸ್ತುಗಳ ಸಾಗಣೆ, ಅಂಬುಲೆನ್ಸ್ ಸೇವೆ, ಸರಕಾರಿ ವಾಹನಗಳು ಮತ್ತು ವೈದ್ಯರು, ಮುಂಚೂಣಿ ಕೆಲಸಗಾರರು, ಬ್ಯಾಂಕ್ ಉದ್ಯೋಗಿಗಳಂತಹ ಇತರ ಅಗತ್ಯ ಸೇವಾ ಪೂರೈಕೆದಾರರ ವೈಯುಕ್ತಿಕ ಸಾರಿಗೆಗಾಗಿ ಅಟೋಮೊಬೈಲ್ ವಾಹನಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆಕಸ್ಮಿಕವಾಗಿ ಕೆಟ್ಟುಹೋಗಿ ನಿಂತರೆ ಆ ವಾಹನಗಳು ನಿರುಪಯುಕ್ತವಾಗುತ್ತವೆ. ಸಮಯಕ್ಕೆ ಸರಿಯಾಗಿ ವಾಹನ ರಿಪೇರಿ ಮಾಡದಿರುವುದರಿಂದ ಜನಸಾಮಾನ್ಯ  ಸುರಕ್ಷತೆಗೂ ಅಡ್ಡಿಯಾಗುತ್ತದೆ. ಆದುದರಿಂದ ಕೋವಿಡ್ ಮೂರನೇ ಅಲೆಯ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರುವ ಸಂದರ್ಭ ಬಂದಲ್ಲಿ ಅಟೋಮೊಬೈಲ್ ಸಂಬಂಧಿತ ವ್ಯಾಪಾರಗಳನ್ನು ಅಗತ್ಯ ಸೇವೆಗಳಾಗಿ ಪರಿಗಣಿಸಬೇಕು ಮತ್ತು ಕಟ್ಟುನಿಟ್ಟಾದ ಮಾರ್ಗಸೂಚಿಯಡಿ ಹಾಗೂ ನಿರ್ಬಂಧಿತ ಕೆಲಸದ ಸಮಯಗಳನ್ನು ಅನುಸರಿಸಿ ಕಾರ್ಯನಿರ್ವಸಲು ಅನುಮತಿಸಬೇಕು ಎಂದು ಅಸೋಸಿಯೇಶನ್‌ನ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ್ ನಾಯಕ್ ಮನವಿಯಲ್ಲಿ ಒತ್ತಾುಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News