×
Ad

ಉಡುಪಿ; ವಿದೇಶಿಗನಿಂದ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ದೂರು

Update: 2022-01-09 22:15 IST

ಉಡುಪಿ, ಜ.9: ಮೇಸೆಂಜರ್ ಮೂಲಕ ಪರಿಚಯವಾದ ವ್ಯಕ್ತಿಯೊರ್ವ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಬೈಯಲ್ಲಿ ವಾಸವಾಗಿರುವ ಗುಂಡಿಬೈಲು ಮೂಲದ ಕ್ಲೊಟಿಲ್ಡಾ ಡಿಕೊಸ್ತಾ (68) ಎಂಬವರು ಊರಿಗೆ ಬಂದಿದ್ದು, ಇವರಿಗೆ ಡಿ.2ರಂದು ಮೇಸೆಂಜರ್ ಮೂಲಕ ರೊಮಾನಿಯ ದೇಶದ ಇಂಗ್ಲೆಂಡ್‌ನಲ್ಲಿ ವೈದ್ಯಕೀಯ ವೃತ್ತಿ ಮಾಡಿ ಕೊಂಡಿರುವುದಾಗಿ ಹೇಳಿಕೊಂಡ ಫಿಲಿಪ್ ಜೇಮ್ಸ್ ಎಂಬಾತನ ಪರಿಚಯ ವಾಗಿತ್ತು.

ಡಿ.20ರಂದು ಫಿಲಿಪ್ ಜೇಮ್ಸ್ ತಾನು ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದು, ತನ್ನನ್ನು ಕಸ್ಟಮ್‌ ನವರು ಹಿಡಿದಿಟ್ಟಿದ್ದಾರೆ, ನನಗೆ ಡಾಲರ್‌ನ್ನು ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಆಗುವುದಿಲ್ಲ ಎಂದು ಕ್ಲೊಟಿಲ್ಡಾ ಡಿಕೋಸ್ತ ನಂಬಿಸಿದನು. ಹೀಗೆ ಮೋಸದಿಂದ ಆತ ಕ್ಲೊಟಿಲ್ಡಾ ಅವರಿಂದ ಹಂತಹಂತವಾಗಿ ಒಟ್ಟು 13,70,042 ರೂ. ಹಣವನ್ನು ಖಾತೆಗೆ ಹಾಕಿಸಿ, ಬಳಿಕ ಯಾವುದೇ ಕರೆಗಳನ್ನು ಸ್ವೀಕರಿಸದೆ ವಂಚನೆ ಮಾಡಿದ್ದಾನೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News