ಡಿ.ಕೆ.ಎಸ್.ಸಿ ಮದೀನಾ ಮುನವ್ವರ ಮಹಾಸಭೆ

Update: 2022-01-09 17:22 GMT
ಶರೀಫ್ ಮರವೂರು - ಅಬ್ದುಲ್ ಅಝೀಝ್ ಸುರಿಬೈಲ್ 

ಮದೀನಾ : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ (ಡಿ.ಕೆ.ಎಸ್.ಸಿ) ಮದೀನಾ ಮುನವ್ವರ ಘಟಕ ಇದರ ವಾರ್ಷಿಕ ಮಹಾಸಭೆಯು   ಮುಹಮ್ಮದಾಲಿ ಪಾಣೆಮಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನು ಉದ್ಘಾಟಿಸಿದ   ಉಮರುಲ್ ಫಾರೂಖ್ ಮುಸ್ಲಿಯರ್ ಕೊಡಗು ಮಾತನಾಡಿ  ಸುನ್ನತ್ ಜಮಾ'ಅತ್'ಗಾಗಿ ಹಲವಾರು ವರ್ಷಗಳಿಂದ ಕಾರ್ಯಾಚರಿಸುತ್ತಾ ಧಾರ್ಮಿಕ ಶಿಕ್ಷಣ ಕೇತ್ರದ ಸೇವೆಯಲ್ಲಿರುವ ಸಂಸ್ಥೆಯ ಜೊತೆ ಎಲ್ಲರೂ ಸಹಕರಿಸಬೇಕಾಗಿ ನುಡಿದರು.

ಮುಖ್ಯ ಅತಿಥಿಯಾಗಿದ್ದ ಡಿ.ಕೆ.ಎಸ್.ಸಿ ಮಕ್ಕಾ ವಲಯಾಧ್ಯಕ್ಷ ಶೆರೀಫ್ ಮರವೂರು ಮಾತನಾಡಿ ಸಂಘಟನೆಯು ನಡೆದು ಬಂದ ಹಾದಿ, ಉದ್ದೇಶವನ್ನು ಸವಿಸ್ತಾರವಾಗಿ ವಿವರಿಸಿ ತಮ್ಮ ಅಧೀನದಲ್ಲಿರುವ ಅಲ್ ಇಹ್ಸಾನ್ ಸಂಸ್ಥೆಯ ಕಾರ್ಯಟುವಟಿಕೆಗಳನ್ನು ವಿವರಿಸಿದರು.

ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕುಪ್ಪೆಪದವು ವಾರ್ಷಿಕ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು. ಸಭೆಯು ಸರ್ವಾನುಮತ ದಿಂದ ಅನುಮೋದಿಸಿತು.

ಚುನಾವಣಾ ಅಧಿಕಾರಿಯಾಗಿದ್ದ ಅಬ್ದುಲ್ ರಝಾಕ್ ಅಳಕೆಮಜಲು ನೇತೃತ್ವದಲ್ಲಿ ಹಳೆಯ  ಸಮಿತಿಯನ್ನು ವಜಾಗೊಳಿಸಿ, ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿ ಅಧ್ಯಕ್ಷರಾಗಿ ಶರೀಫ್ ಮರವೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸುರಿಬೈಲ್ ಆಯ್ಕೆಗೊಂಡರು. ಕೋಶಾಧಿಕಾರಿಯಾಗಿ ಮುಹಮ್ಮದಾಲಿ ಪಾಣೆಮಂಗಳೂರು, ಗೌರವ ಅಧ್ಯಕ್ಷರಾಗಿ ತಾಜುದ್ದೀನ್ ಸುಳ್ಯ ಉಪಾಧ್ಯಕ್ಷರಾಗಿ ಅಶ್ರಫ್ ಕಿನ್ಯ, ಬದ್ರುದ್ದೀನ್ ಕಬಕ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಪಾರೂಕ್ ಅಳಕೆ ಹಾಗೂ ಆಸಿಫ್ ಬದ್ಯಾರ್, ಸಂಚಾಲಕರಾಗಿ ಅಬ್ದುಲ್ ರಝಾಕ್ ಉಳ್ಳಾಲ, ಅಝ್ಮಲ್, ಝುನೈದ್ ಉಳ್ಳಾಲ, ಆಸಿಫ್ ಕುಂಜತ್ ಬೈಲ್ ಇವರನ್ನು  ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಕ್ಬಾಲ್ ಕುಪ್ಪೆಪದವು, ಅಬ್ದುಲ್ ರಝಾಕ್ ಅಳಕೆಮಜಲು, ಅಶ್ರಫ್ ಮರವೂರು,  ಉಮರುಲ್ ಫಾರೂಖ್ ಮುಸ್ಲಿಯರ್ ಕೊಡಗು ಇಸ್ಮಾಯೀಲ್ ಅಲ್ ಮರಾಯಿ, ಮನ್ಸೂರ್ ಉಚ್ಚಿಲ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಭೆಯನ್ನು ಇಕ್ಬಾಲ್ ಕುಪ್ಪೆಪದವು ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News