ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸದಲ್ಲಿ ಶಿಕ್ಷಕ ರಕ್ಷಕ ಸಭೆ

Update: 2022-01-09 18:02 GMT

ಕಲ್ಲಡ್ಕ : ಮಕ್ಕಳಿಗೆ ಧಾರ್ಮಿಕ‌ ಶಿಕ್ಷಣ, ಲೌಕಿಕ ಶಿಕ್ಷಣ, ಜೊತೆಗೆ ಅವರ ಆರೋಗ್ಯದ ಬಗ್ಗೆ ವಿಶೇಷ ಗಮನ ನೀಡುವುದು ಪ್ರತಿಯೊಬ್ಬ ಹೆತ್ತವರ  ಕರ್ತವ್ಯವಾಗಿದೆ ಎಂದು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಹೇಳಿದರು.

ಅವರು‌ ಇಂದು ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆದ ಶಿಕ್ಷಕ ರಕ್ಷಕ ಸಭೆ ಉದ್ಘಾಟಿಸಿ ಮಾತಾಡುತ್ತಿದ್ದರು.

ಮುಖ್ಯ ಭಾಷಣಗಾರರಾಗಿ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೊರ್ಡ್ ಇದರ ಮುಫತ್ತಿಸ್ ಉಮ್ಮರ್ ದಾರಿಮಿ ಮಾತನಾಡಿ ಸ್ವರ್ಗ ಸಂಪಾದನೆಗೆಗಾಗಿ ಪ್ರತಿಯೊಬ್ಬರೂ ಅವರವರ  ತಂದೆ ತಾಯಿಯ ಕಾಲ ಬುಡಕ್ಕೆ ಬನ್ನಿರಿ ಅಲ್ಲಿದೆ ಸ್ವರ್ಗ  ಆ ಮೂಲಕ ತಮ್ಮ ಮನೆಯನ್ನೇ ಸ್ವರ್ಗದ  ಭವನವಾಗಿ ಮಾರ್ಪಡಿಸಿರಿ. ಹೆತ್ತವರು ಹಾಗೂ ಶಿಕ್ಷಕರ ಮಧ್ಯೆ ವಿದ್ಯಾರ್ಥಿಗಳ ಭವಿಷ್ಯದ ಸಂಪರ್ಕ ಸೇತುವೆ  ಕಟ್ಟಿರಿ ಎಂದು ಹೇಳಿದರು.

ಸಮಾರಂಭದ ಅದ್ಯಕ್ಷತೆಯನ್ನು ಅಬೂಬಕ್ಕರ್ ಹಾಜಿ ವಹಿಸಿದರು. ಕಳೆದ ವರ್ಷದ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹೆತ್ತವರ ಸಲಹೆ ಸೂಚನೆಗಳಿಗೆ ಪರಿಹಾರವನ್ನು ನೀಡುವ ಭರವಸೆ ನೀಡಲಾಯಿತು. 

ವೇದಿಕೆಯಲ್ಲಿ  ಮದ್ರಸದ ಸಹ ಶಿಕ್ಷಕರು ಹಾಗೂ ‌ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ‌‌ಮುನೀರುಲ್ ಇಸ್ಲಾಂ ‌ಮದ್ರಸ ಸದರ್ ಇಕ್ಬಾಲ್ ದಾರಿಮಿ ಸ್ವಾಗತಿಸಿದರು. ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News