×
Ad

ಜ.11: ಮೀಫ್ ವತಿಯಿಂದ ಹಿರಾ ವಿಮೆನ್ಸ್ ಕಾಲೇಜಿನಲ್ಲಿ ಶೈಕ್ಷಣಿಕ ಕಾರ್ಯಾಗಾರ

Update: 2022-01-10 09:29 IST

ಮಂಗಳೂರು, ಜ.10: ಮುಸ್ಲಿಮ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್  ಫೆಡರೇಶನ್ (ಮೀಫ್) ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಶೈಕ್ಷಣಿಕ ಕಾರ್ಯಾಗಾರವು ಜ.11ರಂದು ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಲಿದೆ.

ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 9:15ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಡಿಡಿಪಿಐ ಸುಧಾಕರ ಕೆ. ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಶಾಂತಿ ಎಜುಕೇಶನಲ್ ಟ್ರಸ್ಟ್ ಪೆರ್ಮನ್ನೂರು ಇದರ ಅಧ್ಯಕ್ಷ ಎ.ಎಚ್.‌ಮಹಮೂದ್ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಮೂಡುಬಿದಿರೆಯ ಜೈನ್ ಕಾಲೇಜಿನ‌ ಪ್ರೊಫೆಸರ್ ಡಾ.ಪ್ರಭಾತ್ ಬಳ್ನಾಡು‌ ಮತ್ತು ಮೂಡುಬಿದಿರೆ ಜೈನ್ ಹೈಸ್ಕೂಲ್ ವಲಯ ತರಬೇತುದಾರ ಜೆಸಿ ವಿನಯಚಂದ್ರ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮೀಫ್ ಆಡಳಿತ ಸಮಿತಿಯ ಸಭೆಯು ನಡೆಯಲಿದೆ. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಂಗಳೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಡಾ.ಪ್ರಶಾಂತ್ ಕೆ.ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೀಫ್ ಕೋಶಾಧಿಕಾರಿ ಮತ್ತು ಹಿರಾ ಸ್ಕೂಲ್ ಇದರ ಸಂಚಾಲಕ ಕೆ.ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ‌.  ಕಾರ್ಯಕ್ರಮವನ್ನು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News