"ಇದಕ್ಕಿಂತ ಹೆಚ್ಚು ಅವರೇನು ಮಾಡಬಹುದಾಗಿತ್ತು?": ನೊವಕ್ ಜೊಕೊವಿಕ್ ಪರ ಆಸ್ಟ್ರೇಲಿಯಾ ನ್ಯಾಯಾಧೀಶರ ಹೇಳಿಕೆ

Update: 2022-01-10 09:21 GMT

ಸಿಡ್ನಿ: ವರ್ಲ್ಡ್ ನಂ.1 ಟೆನಿಸ್ ಆಟಗಾರ ಸರ್ಬಿಯಾದ ನೊವಕ್ ಜೊಕೊವಿಕ್ ಅವರು ಆಸ್ಟ್ರೇಲಿಯಾದ ಕೋವಿಡ್ ಮಾರ್ಗಸೂಚಿಯಂತೆ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲದೇ ಇರುವುದು ಹಾಗೂ ಅದಕ್ಕೆ ಅವರು ನೀಡಿದ್ದ ವೈದ್ಯಕೀಯ ವಿನಾಯಿತಿಯನ್ನು ಒಪ್ಪದೆ ಅವರ ವೀಸಾ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಆನ್‍ಲೈನ್ ಆಗಿ ಇಂದು ನಡೆಸಿದ ವೇಳೆ ಫೆಡರಲ್ ನ್ಯಾಯಾಧೀಶರೊಬ್ಬರು ಕೊನೆಗೆ ಜೊಕೊವಿಕ್ ಪರ ಎಂದು ತಿಳಿಯಬಹುದಾದ ಹೇಳಿಕೆ ನೀಡಿದರು.

"ಕೋವಿಡ್ ಲಸಿಕೆ ಪಡೆಯದೇ ಇರಲು ವೈದ್ಯಕೀಯ ವಿನಾಯಿತಿಗಾಗಿ ಅವರು ಖ್ಯಾತ ಫಿಸಿಶಿಯನ್ ಅವರಿಂದ ಸಾಕ್ಷ್ಯ ಒದಗಿಸಿದ್ದರು. ಇದಕ್ಕಿಂತ ಹೆಚ್ಚು ಅವರೇನು ಮಾಡಬಹುದಾಗಿತ್ತು?" ಎಂದು ನ್ಯಾಯಾಧೀಶ ಆಂಟನಿ ಕೆಲ್ಲಿ ಕೇಳಿದರು.

ಈ ಪ್ರಕರಣ  ವಿಶ್ವಾದ್ಯಂತ ಕುತೂಹಲ ಕೆರಳಿಸಿದ್ದರಿಂದ ಆನ್‍ಲೈನ್ ವ್ಯವಸ್ಥೆ ಆಗಾಗ ಕೈಗೊಡುತ್ತಲೇ ಇತ್ತು. ವ್ಯಾಕ್ಸಿನ್ ವಿರೋಧಿ ಹೋರಾಟಗಾರರು ಕೋರ್ಟ್ ವಿಚಾರಣೆಯ ಲೈವ್ ಸ್ಟ್ರೀಮ್ ಲಿಂಕ್ ಕೂಡ ಶೇರ್ ಮಾಡಿ ಅದನ್ನು ಯುಟ್ಯೂಬ್ ಮೂಲಕ ಬಿತ್ತರಿಸಿದ್ದರು.

ಆದರೆ ಆಸ್ಟ್ರೇಲಿಯಾದ ಸರಕಾರದ ಪರ ವಕೀಲರು ಜೊಕೊವಿಕ್ ಅವರ ಪರ ವಾದವನ್ನು ತಿರಸ್ಕರಿಸಿ ಅವರು ದೇಶದ ಕೆಲವೊಂದು ನಿಯಮಗಳನ್ನು ಪಾಲಿಸಿಲ್ಲ ಹಾಗೂ ಇವರಿಗೆ ಇತ್ತೀಚೆಗೆ ಸೋಂಕು ತಗಲಿದ್ದರೂ ಅದು ತೀವ್ರವಾಗಿರಲಿಲ್ಲ ಎಂದು ವಾದಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News