ಸುರತ್ಕಲ್: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
Update: 2022-01-10 15:21 IST
ಮಂಗಳೂರು, ಜ.10: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಚೇರಿಯೊಂದರಲ್ಲಿ ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಮೃತರನ್ನು ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ದಿ. ದಿನೇಶ್ ಎಂಬವರ ಪುತ್ರ ಸುಶಾಂತ್ (26) ಎಂದು ಗುರುತಿಸಲಾಗಿದೆ.
ಸುರತ್ಕಲ್ ಕುಳಾಯಿಯ ಸನ್ ರೈಸ್ ಕಾರ್ಪೊರೇಶನ್ ಎಂಬ ಕಚೇರಿಯಲ್ಲಿ ಸುಶಾಂತ್ ಕೆಲಸ ಮಾಡುತ್ತಿದ್ದು, ಅಲ್ಲಿ ಶಾಲನ್ನು ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಶಾಂತ್ ಹೆತ್ತವರು 15 ವರ್ಷಗಳ ಹಿಂದೆ ಮೃತಪಟ್ಟಿದ್ದು, ಅಣ್ಣನನ್ನು ಹೊಂದಿದ್ದಾರೆ.
ಸುಶಾಂತ್ ಬರೆದಿದ್ದೆನ್ನಲಾದ ಕನ್ನಡ ಲಿಪಿಯಲ್ಲಿ ತುಳುವಿನಲ್ಲಿದ್ದ ಪತ್ರವೊಂದು ಪತ್ತೆಯಾಗಿದ್ದು, ತಾನು ಹಣಕಾಸಿನ ಸಾಲದಿಂದ ಈ ಕೃತ್ಯ ಎಸಗುತ್ತಿರುವುದಾಗಿ ಉಲ್ಲೇಖಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ.