ಪರ್ಯಾಯ: ಜ.11ರಂದು ಉಗ್ರಾಣ ಮುಹೂರ್ತ
Update: 2022-01-10 17:37 IST
ಉಡುಪಿ, ಜ.10: ಜ.18ರಂದು ನಡೆಯುವ ಶ್ರೀಕೃಷ್ಣಾಪುರ ಪರ್ಯಾಯೋತ್ಸವಕ್ಕಾಗಿ ಜ.11ರಂದು ಬೆಳಗ್ಗೆ 11 ಗಂಟೆಗೆ ಉಗ್ರಾಣ ಮುಹೂರ್ತ ನಡೆಯಲಿದೆ.
ಪರ್ಯಾಯದ ವೇಳೆ ಭಕ್ತಾದಿಗಳು ನೀಡುವ ಹಸಿರುಹೊರೆ ಕಾಣಿಕೆಗಳನ್ನು ಸಂಗ್ರಹಿಸುವ ಉಗ್ರಾಣ ಮುಹೂರ್ತದ ವೇಳೆ ಭಾವಿ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ ಶ್ರೀಪಾದರು ಉಪಸ್ಥಿತರಿರುವರು.
ಅಲ್ಲದೇ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯುವ ಈ ಮುಹೂರ್ತದ ವೇಳೆ ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ರಾಜಾರಾಮ್ ಪೈ, ಹರಿಶ್ವಂದ್ರ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯ ಗಣೇಶ್ ಅವರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.