×
Ad

ಜ.12: ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ

Update: 2022-01-10 21:23 IST

ಮಂಗಳೂರು, ಜ.10: ನಗರದ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಹಾಗೂ ದತ್ತಿ ಬಹುಮಾನ ಜ. 12ರಂದು ಪಾದುವಾ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಪಾದುವಾ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಿರಿಯ ಲೇಖಕಿಯರ ಹೆಸರಿನ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.

ಕಾರ್ಯಕ್ರಮದಲ್ಲಿ ಡಾ. ಸುನೀತಾ ಎಂ. ಶೆಟ್ಟಿ ಪ್ರಾಯೋಜಿತ 'ತೌಳವ ಸಿರಿ’ ಪ್ರಶಸ್ತಿಯನ್ನು ತುಳು-ಕನ್ನಡ ಸಂಶೋಧಕಿ, ಲೇಖಕಿ ಡಾ. ಇಂದಿರಾ ಹೆಗ್ಗಡೆಗೆ, ನಾಡೋಜ ಸಾರಾ ಅಬೂಬಕರ್ ದತ್ತಿ ಪ್ರಶಸ್ತಿಯನ್ನು ಸಮಾಜ ಸೇವಕಿ ತಬಸ್ಸುಮ್, ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ನಿರ್ಮಲಾ ಸುರತ್ಕಲ್ ಅವರಿಗೆ ಪ್ರದಾನ ಮಾಡಲಾಗುವುದು.

ಪಾದುವಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗ್ಲಾಡಿಸ್ ಅಲೊಶಿಯಸ್ ಅಧ್ಯಕ್ಷತೆ ವಹಿಸುವರು. ಸಾರಾ ಅಬೂಬಕರ್ ಅವರ ಸೊಸೆ ಡಾ. ಸಕೀನಾ ನಾಸೆರ್, ತೀರ್ಪುಗಾರರ ಪರವಾಗಿ ರೂಪಕಲಾ ಆಳ್ವ ಉಪಸ್ಥಿತರಿರು ವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News