ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ವಿವೋ ಬದಲಿಗೆ ಟಾಟಾ ಗ್ರೂಪ್ ಆಯ್ಕೆ

Update: 2022-01-11 14:23 GMT

ಹೊಸದಿಲ್ಲಿ: ಭಾರತದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್ ಚೀನಾದ ಮೊಬೈಲ್ ತಯಾರಕ ವಿವೊ ಬದಲಿಗೆ  ಈ ವರ್ಷದಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಳ್ಳಲು  ಸಿದ್ಧವಾಗಿದೆ. ಟೂರ್ನಿಯ ಆಡಳಿತ ಮಂಡಳಿಯು ಮಂಗಳವಾರದ ಸಭೆಯಲ್ಲಿಈ ಕುರಿತು ನಿರ್ಧರಿಸಿದೆ.

 "ಹೌದು, ಟಾಟಾ ಗ್ರೂಪ್ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಬರಲಿದೆ" ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಪಿಟಿಐಗೆ ಖಚಿತಪಡಿಸಿದ್ದಾರೆ.

ವಿವೊ  ಕಂಪೆನಿಯು  2018-2022 ರ ತನಕ  ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ 2,200 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿತ್ತು.  ಆದರೆ 2020 ರಲ್ಲಿ  ಭಾರತ ಹಾಗೂ ಚೀನಾದ ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ ಮಿಲಿಟರಿ ಸಂಘರ್ಷವಾದ ನಂತರ ವಿವೊ ಒಂದು ವರ್ಷದ ವಿರಾಮವನ್ನು ತೆಗೆದುಕೊಂಡಿತು. ಆಗ ಬ್ರ್ಯಾಂಡ್ ಡ್ರೀಮ್ 11 ಅನ್ನು ಶೀರ್ಷಿಕೆ ಪ್ರಾಯೋಜಕತ್ವವಹಿಸಿಕೊಂಡಿತ್ತು. ಆದಾಗ್ಯೂ, ವಿವೋ 2021 ರಲ್ಲಿ ಐಪಿಎಲ್ ಟೈಟಲ್ ಪ್ರಾಯೋಜಕರಾಗಿ ಮರಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News