×
Ad

100ಕ್ಕೂ ಅಧಿಕ ನೆಲಬಾಂಬ್‌ಗಳನ್ನು ಪತ್ತೆಹಚ್ಚಿದ 'ಮಗಾವಾ' ಇಲಿ ಇನ್ನಿಲ್ಲ

Update: 2022-01-12 22:47 IST
ಮಾಗಾವಾ ಇಲಿ(photo:twitter:@rama_rajeswari)
 

ನೊಮ್‌ಪೆನ್, ಜ.12: ಕಾಂಬೊಡಿಯಾದಲ್ಲಿ ನೆಲಬಾಂಬ್ ಪತ್ತೆಯಲ್ಲಿ ನಿಷ್ಣಾತವಾಗಿದ್ದ ಇಲಿ ಮಾಗಾವಾ ತನ್ನ 8ನೇ ವಯಸ್ಸಿನಲ್ಲಿ ಅಸುನೀಗಿದೆ. ಸುಮಾರು 5 ವರ್ಷಗಳ ಅವಧಿಯಲ್ಲಿ ಮಗಾಮಾ 100ಕ್ಕೂ ಅಧಿಕ ನೆಲಬಾಂಬ್‌ಗಳು ಹಾಗೂ ಸ್ಫೋಟಕಗಳನ್ನು ಪತ್ತೆಹಚ್ಚಿತ್ತು. ಆ ಮೂಲಕ ದಕ್ಷಿಣ ಏಶ್ಯದ ಈ ರಾಷ್ಟ್ರದಲ್ಲಿ ನೂರಾರು ಮಂದಿಯ ಜೀವವುಳಿಸಿದ ಆಪತ್‌ಬಾಂಧವನೆನಿಸಿಕೊಂಡಿತ್ತು.

‘ಹೀರೋ ರ್ಯಾಟ್’ ಎಂದೇ ಖ್ಯಾತವಾಗಿದ್ದ ಮಾಗಾವಾವನ್ನು ಅಂತಾರಾಷ್ಟ್ರೀಯ ಸೇವಾಸಂಸ್ಥೆ ಎಪಿಓಪಿಓ ನಿಯೋಜಿಸಿತ್ತು. ಈ ಸಂಸ್ಥೆಯು ನೆಲಬಾಂಬ್ ಹಾಗೂ ಸ್ಫೋಟಕಗಳನ್ನು ಪತ್ತೆಹಚ್ಚಲು ಆಫ್ರಿಕಾ ಮೂಲದ ಹೆಗ್ಗಣಗಳನ್ನು ಬಳಸಿಕೊಳ್ಳುತ್ತಿದೆ.

ಮಾಗಾವಾನ ಆರೋಗ್ಯ ಉತ್ತಮವಾಗಿತ್ತು. ಕಳೆದ ವಾರದ ಆರಂಭದಲ್ಲಿ ಅದು ಎಂದಿನ ಉತ್ಸಾಹದೊಂದಿಗೆ ಆಟವಾಡುತ್ತಿತ್ತು. ಆದರೆ ವಾರಾಂತ್ಯದಲ್ಲಿ ಅದು ಮಂಕಾಗತೊಡಗಿತು ಮತು ಹೆಚ್ಚು ಹೊತ್ತು ನಿದ್ರಿಸತೊಡಗಿತ್ತು . ತನ್ನ ಜೀವಿತದ ಕೊನೆಯ ದಿನಗಳಲ್ಲಿ ಅದು ಆಹಾರ ಸೇವನೆಯಲ್ಲಿ ಆಸಕ್ತಿಯನ್ನು ಕಳೆದುಕೊಂಡಿತ್ತು’’ ಎಂದು ಎಪಿಓಪಿಓ ಏಹಳಿಕೆಯೊಂದರಲ್ಲಿ ತಿಳಿಸಿದೆ.

ಹಲವು ದಶಕಗಳ ಅಂತರ್ಯುದ್ಧದಿಂದ ಜರ್ಜರಿತವಾದ ಕಾಂಬೊಡಿಯಾವು ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನೆಲಬಾಂಬ್ ಹೂತುಹಾಕಲ್ಪಟ್ಟ ದೇಶಗಳಲ್ಲೊಂದೆಂಬ ಕುಖ್ಯಾತಿಯನ್ನು ಪಡೆದಿದೆ. ಈ ದೇಶದ 1 ಸಾವಿರ ಚ.ಕಿ.ಮೀ.ಗೂ ಅಧಿಕ ಭೂಪ್ರದೇಶವು ನೆಲಬಾಂಬ್‌ನಿಂದ ಆವೃತವಾಗಿದೆಯೆಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News