​ದ.ಕ. ಜಿಲ್ಲಾ ಜೆಡಿಎಸ್ ಮುಸ್ಲಿಮ್ ಮುಖಂಡರ ಪ್ರತಿನಿಧಿ ಸಮಾವೇಶ

Update: 2022-01-13 03:20 GMT

ಬಿ.ಸಿ.ರೋಡ್ : ರಾಜ್ಯದಲ್ಲಿ ಮುಸ್ಲಿಮ್ ಸಮುದಾಯಕ್ಕೆ ರಾಜಕೀಯವಾಗಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದರೆ ಅದು ಜೆಡಿಎಸ್ ಮಾತ್ರ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಮುಹಮ್ಮದ್ ಕುಂಞಿ ಹೇಳಿದ್ದಾರೆ.

ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ದ.ಕ. ಜಿಲ್ಲಾ ಮುಸ್ಲಿಮ್ ಮುಖಂಡರ ಪ್ರತಿನಿಧಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಮುಸ್ಲಿಮ್ ಪ್ರತಿನಿಧಿ ಸಭೆ ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಶಫಿ ಮಾತನಾಡಿ, ಪಕ್ಷದೊಳಗೆ ಯಾವುದೇ ಅಸಮಾಧಾನ, ಗೊಂದಲಗಳಿದ್ದರೂ ಎಲ್ಲವನ್ನೂ ಬದಿಗಿಟ್ಟು ಮುಂದಿನ ದಿನಗಳಲ್ಲಿ ಪಕ್ಷ ಸಂಘಟಿಸಲು ಮುಸ್ಲಿಮ್ ನಾಯಕರು ಸಿದ್ಧರಾಗಬೇಕು ಎಂದರು.

ಪಕ್ಷದ ಹಿರಿಯ ಮುಖಂಡ ಎ.ಎ.ಹೈದರ್ ಪರ್ತಿಪ್ಪಾಡಿ, ಪ್ರಮುಖರಾದ ಇಬ್ರಾಹೀಂ ಗೋಳಿಕಟ್ಟೆ, ಅಶ್ರಫ್ ಕಲ್ಲೇಗ, ಅಝೀಝ್ ಮಲಾರ್, ಇಕ್ಬಾಲ್ ಮುಲ್ಕಿ, ಇಕ್ಬಾಲ್ ಎಲಿಮಲೆ ಮತ್ತಿತರರು ಮಾತನಾಡಿದರು.

ಸೈಯದ್ ಮೀರಾ ಸಾಹೇಬ್ ಕಡಬ, ಅಬೂಬಕರ್ ಅಮ್ಮುಂಜೆ, ಲತೀಫ್ ವಳಚ್ಚಿಲ್, ಜಾಫರ್ ಖಾನ್ ವಿಟ್ಲ, ರಾಶ್ ಬ್ಯಾರಿ, ನಝೀರ್ ಸಾಮಾಣಿಗೆ, ಅಬೂಬಕರ್ ಫರಂಗಿಪೇಟೆ, ಹಕೀಂ ವಾಮಂಜೂರು, ಹಂಝ ಕಬಕ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಉಳ್ಳಾಲ ನಗರಸಭಾ ಸದಸ್ಯರಾದ ಖಲೀಲ್ ಉಳ್ಳಾಲ, ಜಬ್ಬಾರ್ ಉಳ್ಳಾಲ, ಬಶೀರ್ ಉಳ್ಳಾಲ ಮತ್ತು ಕುಪ್ಪೆಪ್ಪದವು ಗ್ರಾಪಂ ಅಧ್ಯಕ್ಷ ಡಿ.ಪಿ.ಹಮ್ಮಬ್ಬ, ಗ್ರಾಪಂ ಸದಸ್ಯ ರಿಯಾಝ್ ಮತ್ತು ಜೆಡಿಎಸ್ ಎನ್ನಾರೈ ಹಿರಿಯ ನಾಯಕ ಅಶ್ರಫ್ ಕೋಝಿ ಖಾನ್‌ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಆಯೋಜಕ ಹಾರೂನ್ ರಶೀದ್ ಬಂಟ್ವಾಳ ಸ್ವಾಗತಿಸಿ, ವಂದಿಸಿದರು. ಪಕ್ಷದ ಯುವ ಮುಖಂಡ ಸವಾಝ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News